Sunday, September 8, 2024

ಕಂಟೆಂಟ್​ ಕ್ರಿಯೇಟರ್​ ವಿಕ್ಕಿಪೀಡಿಯಾ ವಿಕಾಸ್​ಗೆ ಪೊಲೀಸರಿಂದ ವಾರ್ನಿಂಗ್​

ಬೆಂಗಳೂರು: ಕಂಟೆಂಟ್​ ಕ್ರಿಯೇಟರ್​ ವಿಕ್ಕಪೀಡಿಯಾ ವಿಕಾಸ್​ಗೆ ಪೊಲೀಸರು ವಾರ್ನಿಂಗ್​ ನೀಡಿದ್ದಾರೆ. ಮಾದಕ ವಸ್ತುಗಳ ಬಗ್ಗೆ ವಿಡಿಯೋ ಹಂಚಿಕೊಂಡ ಹಿನ್ನೆಲೆ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:  ನಿರೂಪಕಿ ಅಪರ್ಣಾ ವಸ್ತಾರೆ ಕ್ಯಾನ್ಸರ್​ನಿಂದ ನಿಧನ!

ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ವಿಕಾಸ್‌ನನ್ನು ಬೈಯಪ್ಪನಹಳ್ಳಿ ಪೊಲೀಸರು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಡ್ರಗ್ಸ್ ಬಗೆಗಿನ ಪ್ರಚೋದನಾತ್ಮಕ ಹೇಳಿಕೆಯ ವಿಡಿಯೋ ಡಿಲೀಟ್ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾದಕವಸ್ತು ವ್ಯಸನದ ಬಗ್ಗೆ ಇತ್ತೀಚೆಗೆ ವಿಕಾಸ್ ಹಾಗೂ ಅವರ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡಿದ್ದರು.

RELATED ARTICLES

Related Articles

TRENDING ARTICLES