Sunday, September 8, 2024

ಬಿಬಿಎಂಪಿ, ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿ ಹೆಚ್ಚಾದ ಹಿನ್ನೆಲೆ ಹೈಕೋರ್ಟ್​ ಸ್ವಯಂ ಪ್ರೇರಿತ ಪಿಐಎಲ್ ದಾಖಲು ಮಾಡಿಕೊಂಡಿದ್ದು, ಕ್ರಮ ಕೈಗೊಳ್ಳದ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ರಾಜ್ಯದಲ್ಲಿ ಈಗಾಗಲೇ 6.8 ಲಕ್ಷ ಅಕ್ರಮ ಜಾಹಿರಾತುಗಳಿವೆ ಎಂಬ ವರದಿಯಿದೆ. ರಸ್ತೆಗಳಲ್ಲಿ ಅಕ್ರಮ ಹೋರ್ಡಿಂಗ್​ಗಳ ಹಾವಳಿ ಮುಂದುವರಿದಿದೆ. ಈ ಅಕ್ರಮ ಜಾಹಿರಾತುಗಳಿಂದಾಗಿ ಪಾದಚಾರಿಗಳಿಗೆ ಸಮಸ್ಯೆ ಹಾಗೂ ಸಂಚಾರದಟ್ಟಣೆಗೆ ಕಾರಣವಾಗುತ್ತಿದೆ. ಜೊತೆಗೆ ಕೋರ್ಟ್ ಆದೇಶಗಳಿದ್ದರೂ ಸಂಬಂಧಪಟ್ಟ ಪ್ರಾಧಿಕಾರಗಳು ಪಾಲಿಸಿಲ್ಲ ಎಂದು ಹೈಕೋರ್ಟ್ ವಾಗ್ದಾಳಿ ನಡೆಸಿದೆ.

ಇದನ್ನು ಓದಿ; ಲೂಟಿ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರದ ಕೆಲಸ: ಆರ್.ಅಶೋಕ್

ಇನ್ನು ಈ ಕುರಿತು ನ್ಯಾಯಾಂಗ ನಿಂದನೆ ಏಕೆ ದಾಖಲಿಸಬಾರದೆಂದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್​ ನೋಟಿಸ್ ನೀಡಿದೆ. ಇದಕ್ಕೆ ಜುಲೈ.26 ರರೊಳಗೆ ಉತ್ತರಿಸುವಂತೆ ಆದೇಶಿಸಿದೆ. ಜೊತೆಗೆ ಸರ್ಕಾರದ ಅನುಮೋದನೆಯೊಂದಿಗೆ ಜಾಹೀರಾತು ನಿಯಮ ರೂಪಿಸಲಾಗಿದೆ.

ಬಿಬಿಎಂಪಿ ಜಾಹೀರಾತು ಸಂಬಂಧ ಕರಡು ಬೈಲಾ ಪ್ರಕಟಿಸಬೇಕಿದೆ ಎಂದು ಹೈಕೋರ್ಟ್​ಗೆ ಎಎಜಿ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದ್ದಾರೆ. ಪ್ರತಿ ಅಕ್ರಮ ಜಾಹೀರಾತು ತಡೆಗೆ ವಿಫಲವಾದರೆ 1 ಲಕ್ಷ ರೂ. ದಂಡ ನೀಡಬೇಕೆಂದು ಆದೇಶವಿದೆ. ಆದರೂ, ಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿಯಿಂದ ನಿರ್ಲಕ್ಷ್ಯ ತೋರಲಾಗಿದೆ. ಫ್ಲೆಕ್ಸ್ ಹಾವಳಿ ತಡೆಯಲು ಸದಾಕಾಲವೂ ಸನ್ನದ್ಧವಾಗಿರಬೇಕು.

RELATED ARTICLES

Related Articles

TRENDING ARTICLES