Thursday, November 21, 2024

T20 WC 2024 : ಸಹಾಯಕ ಸಿಬ್ಬಂದಿಗಳಿಗೆ ತನ್ನ ಪಾಲಿನ 5 ಕೋಟಿ ರೂ.ಕೊಡಲು ಮುಂದಾಗಿದ್ದ ಹಿಟ್​ಮ್ಯಾನ್​

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಣೆ ಮಾಡಿದ್ದ ₹125 ಕೋಟಿ ನಗದು ಬಹುಮಾನ ಆಟಗಾರರು, ಕೋಚಿಂಗ್ ಸ್ಟಾಫ್, ಸಪೋರ್ಟಿಂಗ್ ಸ್ಟಾಫ್ ಸಹಿತ ವಿಶ್ವಕಪ್ ತಂಡದಲ್ಲಿದ್ದ ಅಷ್ಟೂ ಮಂದಿಗೆ ತಲುಪಿದೆ. ಆಟಗಾರರಿಗೆ ತಲಾ ₹5 ಕೋಟಿ, ಕೋಚಿಂಗ್ ಸ್ಟಾಫ್​ಗೆ ತಲಾ ₹2.5 ಕೋಟಿ, ಸಪೋರ್ಟಿಂಗ್ ಸ್ಟಾಫ್​ಗೆ ತಲಾ ₹2 ಕೋಟಿ, ಮೀಸಲು ಆಟಗಾರರಿಗೆ ತಲಾ ₹1 ಕೋಟಿ ಹಣವನ್ನು ನೀಡಲಾಗಿದೆ.

ಮೂವರು ಫಿಸಿಯೊಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್​ಗಳು, ಇಬ್ಬರು masseurs ಮತ್ತು ಇಬ್ಬರು ಸ್ಟ್ರೆಂತ್ & ಕಂಡಿಷನಿಂಗ್ ಕೋಚ್​ಗಳಿಗೆ ನಗದು ಬಹುಮಾನ ನೀಡುವ ವಿಚಾರದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಅಧಿಕಾರಿಗಳ ಮಧ್ಯೆ ಸಣ್ಣದೊಂದು ಜಟಾಪಟಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸಪೋರ್ಟಿಂಗ್ ಸ್ಟಾಫ್​ಗೆ ₹2 ಕೋಟಿ ಕೊಡಲು ಬಿಸಿಸಿಐ ಸಿದ್ಧವಿರಲಿಲ್ಲ. ಅವರಿಗೇಕೆ ಅಷ್ಟೊಂದು ಹಣ ಕೊಡಬೇಕು ಎಂದು ಬಿಸಿಸಿಐ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಅವರು ತನ್ನ ತಂಡದ ಸಪೋರ್ಟಿಂಗ್ ಸ್ಟಾಫ್ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.

ವಿಶ್ವಕಪ್ ಗೆಲುವಿನ ಹಿಂದೆ ಸಹಾಯಕ ಸಿಬ್ಬಂದಿಯ ಪಾತ್ರ ಎಷ್ಟಿದೆ ಎಂಬುದು ನನಗೆ ಗೊತ್ತು. ಅವರು ವರ್ಷಗಳ ಕಾಲ ಹಗಲೂ-ರಾತ್ರಿ ಇದಕ್ಕಾಗಿ ಶ್ರಮ ಪಟ್ಟಿದ್ದಾರೆ. ಅವರಿಲ್ಲದಿದ್ದರೆ ನಾವು ವಿಶ್ವಕಪ್ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಏನು ಸಿಗಬೇಕೋ ಅದು ಸಿಗಲೇಬೇಕು. ಇಲ್ಲವಾದಲ್ಲಿ ನಾನು ನನ್ನ ಪಾಲಿಗೆ ಬರುವ ₹5 ಕೋಟಿ ಹಣವನ್ನು ಅವರಿಗೆ ಹಂಚಿ ಬಿಡುತ್ತೇನೆ ಎಂದು ರೋಹಿತ್​ ಶರ್ಮಾ ಅವರು ಖಡಕ್​ ಆಗಿ ಬಿಸಿಸಿಐ ಮುಂದೆ ಹೇಳಿದ್ದಾರಷ್ಟೇ! ವಿಶ್ವ ಚಾಂಪಿಯನ್ ತಂಡದ ನಾಯಕ ಯಾವಾಗ ಹೀಗೆ ಕಡ್ಡಿ ತುಂಡದಂತೆ ಹೇಳಿದ್ರೋ, ಅಲ್ಲಿಗೆ ಬಿಸಿಸಿಐಗೆ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ.

ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಈ ಸಹಾಯಕ ಸಿಬ್ಬಂದಿಯ ಬಗ್ಗೆ ಯಾರೂ ಕೂಡ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ, ರೋಹಿತ್​ ಶರ್ಮಾ ಅವರು ತೆರೆಯ ಹಿಂದಿನ ಹೀರೋಗಳ ಪರವಾಗಿ ನಿಂತು  ನಿಜವಾದ ಹೀರೋ ಆಗಿದ್ದಾರೆ.

RELATED ARTICLES

Related Articles

TRENDING ARTICLES