Sunday, September 8, 2024

ನಮ್ಮ 5 ಗ್ಯಾರಂಟಿಗಳಲ್ಲಿ ಯಾವುದನ್ನು ನಿಲ್ಲಿಸಲ್ಲ‌- N.ಚಲುವರಾಯಸ್ವಾಮಿ

ಹಾಸನ; ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಹಣ ಗ್ಯಾರಂಟಿಗೆ ಬಳಸಿಕೊಂಡಿದ್ದಕ್ಕೆ ಕೇಂದ್ರ ಆಯೋಗದಿಂದ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಇದಕ್ಕೆ ನಮ್ಮ ಸರ್ಕಾರ ಉತ್ತರ ಕೊಡುತ್ತದೆ. ಎಸ್ಸಿ ಎಸ್ಟಿ ಹಣವನ್ನು ಇಂತದಕ್ಕೆ ಉಪಯೋಗಿಸಿಕೊಳ್ಳಬೇಕು ಎಂದಿಲ್ಲ.

ಮೀಸಲಿರುವ 38 ಸಾವಿರ ಕೋಟಿ ಹಣವನ್ನು ಎಸ್ಸಿ ಎಸ್ಟಿ ಅವರಿಗೆ ತಲುಪಿಸಬೇಕು ಅಷ್ಟೇ. ಈ ಕಾನೂನನ್ನ ತಂದಿದ್ದೇ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರೇ ಯೋಜನೆ ತಂದ್ರು ಎಂಬುದನ್ನು ನೀವು ಕೂಡ ಅಪ್ರಿಷಿಯೇಟ್ ಮಾಡುವುದಿಲ್ಲ. ಈ ಯೋಜನೆಯನ್ನು ಕೆಲ ರಾಜ್ಯಗಳು ತಾವು ಕೂಡ ಜಾರಿಗೆ ತರಲು ಯೋಜಿಸಿವೆ ಅದು ಎಲ್ಲೂ ಪ್ರಚಾರ ಆಗೊಲ್ಲ.

ಇದನ್ನು ಓದಿ; ಡೆಂಘೀ ಸೊಳ್ಳೆಗಿಂತ ಬಿಜೆಪಿ ಸೊಳ್ಳೆ ಹೆಚ್ವು ಹರಡುತ್ತಿದೆ- ದಿನೇಶ್​ ಗುಂಡೂರಾವ್

38,000 ಕೋಟಿಯನ್ನ ಬೇರೆ ಜನರಿಗೆ ಕೊಟ್ಟರೆ ಮಾತ್ರ ಅದು ಅಪರಾಧವಾಗುತ್ತೆ. ಬೇರೆ ಯಾವುದೇ ಯೋಜನೆಗೆ ಹಣ ನೀಡಿದ್ರೆ ಅದು ಅಪರಾಧ ಅಲ್ಲ. ಈ ವಿಚಾರವನ್ನು ವಿರೋಧ ಪಕ್ಷಗಳು ಟೀಕೆಗೋಸ್ಕರ ಮಾಡುತ್ತಿರಬಹುದು. ಆಯೋಗಕ್ಕೆ ಯಾರಾದರೂ ತಪ್ಪು ಮಾಹಿತಿ ನೀಡಿದ್ದಾರೋ ಏನೋ ಗೊತ್ತಿಲ್ಲ. ಇದರಿಂದ ಯಾರದಾದರೂ ಸಂಬಳವನ್ನು ನೆಲೆಸಿದ್ದೇವೆಯಾ. ಕೊರಗುತ್ತಿಗೆ ಆಧಾರದವರಿಗೂ ಸಂಬಳವನ್ನು ನಿಲ್ಲಿಸಿಲ್ಲ.

ಯಾವುದೇ ಅಭಿವೃದ್ಧಿ ಕಾರ್ಯವನ್ನು ನಾವು ನಿಲ್ಲಿಸಿದ್ದೇವಾ? ವಿರೋಧ ಪಕ್ಷದವರು ಕೂಗಾಡಿವರೆಗೂ ಕೂಗಾಡಿಕೊಳ್ಳಲಿ ಎಂದು ಸುಮ್ಮನೆ ಇದ್ದೇವೆ ಅಷ್ಟೇ. ರಾಜ್ಯದ ಬಜೆಟ್ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ನಾವು ನಿಲ್ಲಿಸಿಲ್ಲ.

ಸಿಎಸ್ಆರ್ ಫಂಡನ್ನು ಕೂಡ ನಾವು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದನ್ನೆಲ್ಲಾ ವಿರೋಧ ಪಕ್ಷಗಳು ಹೇಳೋದೇ ಇಲ್ಲ. ಇಲ್ಲಸಲ್ಲದ್ದನ್ನು ಉಪಯೋಗಿಸಿ ನಮ್ಮ ವಿರುದ್ಧ ಮಾತನಾಡುತ್ತಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಾವು ನಿಲ್ಲಿಸಿಲ್ಲ. ನಮ್ಮ ಐದು ಗ್ಯಾರಂಟಿಗಳಲ್ಲಿ ಯಾವುದನ್ನು ನಿಲ್ಲಿಸಲ್ಲ‌ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದ್ರು.

RELATED ARTICLES

Related Articles

TRENDING ARTICLES