Sunday, September 8, 2024

ಸಾರ್ವಜನಿಕರಿಗೆ ಸಿಹಿಸುದ್ದಿ: BPL ಕಾರ್ಡ್​ ಪಡೆಯಲು ಅರ್ಜಿ ಆಹ್ವಾನ!

ಬೆಂಗಳೂರು: ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಒಂದು ವರ್ಷದಿಂದ ಕಾಯುತ್ತಿದ್ದ ಫಲಾನುಭವಿಗಳಿಗೆ ಸರ್ಕಾರ ಇದೀಗ ಶುಭಸುದ್ದಿಯೊಂದನ್ನು ನೀಡಿದೆ.

ಆಹಾರ ನಾಗರೀಕ ಸರಬರಾಜು ಇಲಾಖೆಯೂ ಇದೀಗ ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ. ಸದ್ಯ ಆಹಾರ ನಾಗಾರೀಕ ವೆಬ್​ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್​​ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ:  ಬೆಳ್ಳಂ ಬೆಳಗ್ಗೆ 56 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ

ಇನ್ನು BPL, APL, ತುರ್ತು ಆರೋಗ್ಯ ಸಂಬಂಧ BPL ಕಾರ್ಡ್ ಅರ್ಜಿಗೆ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಿದೆ. ಇದರ ಜೊತೆಗೆ ರೇಷನ್ ಕಾರ್ಡ್​​ಗಳ ತಿದ್ದುಪಡಿಗೂ ಅವಕಾಶ ನೀಡಿದ್ದು‌, ಬೆಂಗಳೂರು ಒನ್ ಸೆಂಟರ್​​ಗಳಿಗೆ ಫಾಲನುಭವಿಗಳು ಆಗಮಿಸುತ್ತಿದ್ದಾರೆ.

ಒಂದು ವರ್ಷದ ಬಳಿಕ ರೆಷಾನ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ಕೊಟ್ಟಿರುವ ಕಾರಣ ಫಲಾನುಭವಿಗಳು ಬೆಂಗಳೂರು ಒನ್ ಸೆಂಟರ್​​ಗಳಿಗೆ ಧಾವಿಸುತ್ತಿದ್ದಾರೆ. ಆದರೆ ವೆಬ್​ಸೈಟ್ ಒಪನ್ ಆಗುತ್ತಿದ್ದು, ಅರ್ಜಿ‌ ಮಾತ್ರ ರವಾನೆಯಾಗುತ್ತಿಲ್ಲ.‌ ಹೀಗಾಗಿ ಆಹಾರ ನಾಗಾರೀಕ ಸರಬರಾಜು ಇಲಾಖೆಯ ವಿರುದ್ದ ಫಾಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES