Sunday, September 8, 2024

ಡೆಂಘೀ ಸೊಳ್ಳೆಗಿಂತ ಬಿಜೆಪಿ ಸೊಳ್ಳೆ ಹೆಚ್ವು ಹರಡುತ್ತಿದೆ- ದಿನೇಶ್​ ಗುಂಡೂರಾವ್​

ದಾವಣಗೆರೆ; ಸರ್ಕಾರ ಡೆಂಗ್ಯೂ ಬಗ್ಗೆ ಕ್ರಮ‌ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​​ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಡೆಂಘೀ ನಿಯಂತ್ರಣಕ್ಕೆ ಎಲ್ಲಾ ಅವಶ್ಯಕ ಕ್ರಮ ಕೈಗೊಂಡಿದ್ದೇವೆ. ಜಿಲ್ಲಾ ಮಟ್ಟದ ಟಾರ್ಸ್ ಪೋರ್ಸ್ ಕಮಿಟಿ ರಚನೆ ಮಾಡಿದ್ದೇವೆ. ಎಲ್ಲಾ ಕಡೆ ಉತ್ಪತ್ತಿಯಾಗುವ ಲಾರ್ವಗಳನ್ನು ನಾಶ ಮಾಡುವ ಕೆಲಸ ಮಾಡುತ್ತೇವೆ ಎಂದ್ರು.

ಡೆಂಘೀ ಪತ್ತೆಯಾಗುವ ಜಾಗದಲ್ಲಿ ಹೆಚ್ವು ತಪಾಸಣೆ ನಡೆಸಲು ಸೂಚನೆ ನೀಡಿದ್ದೇವೆ. ಖಾಸಗಿ ಲ್ಯಾಬ್​​ಗಳಲ್ಲಿ ಡೆಂಘೀ ಟೆಸ್ಟ್​ಗೆ 300 ರೂಪಾಯಿ ನಿಗದಿ ಮಾಡಲಾಗಿದೆ. ಹೆಚ್ಚು ತೆಗೆದುಕೊಳ್ಳುವುದು ಕಂಡು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಡೆಂಘೀ ಸೊಳ್ಳೆಗಿಂತ ಬಿಜೆಪಿ ಸೊಳ್ಳೆ ಹೆಚ್ವು ಹರಡುತ್ತಿದೆ. ಬಿಜೆಪಿ ಸೊಳ್ಳೆ ಡೇಂಜರ್ ಎಂದು ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ; ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ 18 ಖಾತೆಗೆ.. ಯಾರಿಗೆ ಯಾವತ್ತು ಎಷ್ಟು ಟ್ರಾನ್ಸ್​ಫರ್​?

ಬಿಜೆಪಿಯವರು ಕೂಡ ನಮಗೆ ಕೈ ಜೋಡಿಸಬೇಕು ಆಗ ಮಾತ್ರ ಡೆಂಗ್ಯೂ ಎದುರಿಸಲು ಸಾಧ್ಯ. ಹೈಕೋರ್ಟ್​ಗೆ ಅವರು ಕೇಳಿದ ವಿಚಾರಕ್ಕೆ ನಾವು ವರದಿಯನ್ನು ಕೊಡುತ್ತೇವೆ. ಪ್ರತಿ ಶುಕ್ರವಾರ ಎಲ್ಲಾ ಅಧಿಕಾರಿಗಳು ಡೆಂಘೀ ನಿಯಂತ್ರಣಕ್ಕೆ ಕೈ ಜೊಡಿಸಬೇಕು ಎಂದು ಹೇಳಲಾಗಿದೆ. ಮೆಡಿಕಲ್ ಎಮರ್ಜೆನ್ಸಿ ಮಾಡುವ ಅವಶ್ಯಕತೆ ಇಲ್ಲ. ಬಿಳಿ ರಕ್ತ ಕಣದ ಕೊರತೆ ಇಲ್ಲ, ಎಲ್ಲಾ ಕಡೆ ಸಿಗ್ತಾ ಇದೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES