Sunday, September 8, 2024

ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ: ಬಟ್ಟೆ ಹೊತ್ತೊಯ್ದ ಪೊಲೀಸರು

ಚಿಕ್ಕಮಗಳೂರು: ನಿಷೇಧಿತ ಪ್ರದೇಶದಲ್ಲಿ ಜಲಪಾತದ ಬಳಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರ ಬಟ್ಟೆಗಳನ್ನು ಪೊಲೀಸರು ಹೊತ್ತೊಯ್ಯುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್​ ಬಳಿ ಘಟನೆ ನಡೆದಿದೆ. ಘಾಟ್​ ನ ಜಲಪಾತದ ಬಳಿಗೆ ತೆರಳುವುದು ನಿಷೇಧವಿದ್ದರೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಪಾತದ ಬಳಿ ತೆರಳಿ ಹುಚ್ಚಾಟ ಮೆರೆಯುತ್ತಿದ್ದಾರೆ. ಈ ಹಿನ್ನೆಲೆ ಬಣಕಲ್​ ಗಸ್ತು ತಿರುಗುತ್ತಿದ್ದ ಪೊಲೀಸರು ಪ್ರವಾಸಿಗರ ಬಟ್ಟೆಗಳನ್ನು ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ವಶಕ್ಕೆ: ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ಆರಂಭದಲ್ಲಿ ಪ್ಲೀಸ್​ ಸರ್..ಪ್ಲೀಸ್​ ಎಂದು ಪೊಲೀಸರನ್ನು ಯುವಕರು ಬೇಡಿಕೊಂಡಿದ್ದಾರೆ. ಬಳಿಕ ಇದೇ ವಿಚಾರವಾಗಿ ಪೊಲೀಸರು ಮತ್ತು ಪ್ರವಾಸಿಗರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೊಲೀಸರಿಗೆ ಆವಾಜ್ ಹಾಕಿ ಯುವಕರು ಪೇಚಿಗೆ ಸಿಲುಕಿದ್ದಾರೆ. ಕೊನೆಗೆ ಸ್ವಲ್ಪ ಸಮಯದ ನಂತರ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಪೊಲೀಸರು ಬಟ್ಟೆಗಳನ್ನು ವಾಪಾಸ್​ ನೀಡಿ ಕಳಿಸಿದ್ದಾರೆ.

RELATED ARTICLES

Related Articles

TRENDING ARTICLES