Sunday, September 8, 2024

ಕಂಡಕ್ಟರ್​​​ನಿಂದ ಕಪಾಳಮೋಕ್ಷ.. ರೊಚ್ಚಿಗೆದ್ದ ವಿದ್ಯಾರ್ಥಿಗಳು..

ಹಾವೇರಿ: ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸಾರಿಗೆ ಸಂಸ್ಥೆಗಳ ಡ್ರೈವರ್​, ಕಂಡಕ್ಟರ್​​ಗಳಿಗೂ ಹೊಸ ಶಕ್ತಿ ಬಂದಂತಾಗಿದೆ. ಎಲ್ಲಾ ಬಸ್​ಗಳೂ ರಶ್ಶೋ ರಶ್​.. ಹೆದ್ದಾರಿಯಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಂತೂ ಬಸ್​ಗಳು ನಿಲ್ಲುವುದೇ ದುಸ್ತರವಾಗಿದೆ. ಚಲಿಸುವ ಬಸ್​​ನಲ್ಲಿ ಮಕ್ಕಳು ಫುಟ್​ ಬೋರ್ಡ್​​ ಮೇಲೆ ನಿಂತು ಸಾಗುವ ಸಾಕಷ್ಟು ದೃಶ್ಯಗಳು ವೈರಲ್​ ಆಗಿವೆ. ಹಾಗೇನೆ ಬಸ್​ಗಳಲ್ಲಿ ಸೀಟ್​ ಗಲಾಟೆ, ಕಂಡಕ್ಟರ್​ ಜೊತೆ ಪ್ರಯಾಣಿಕರ ಗಲಾಟೆ ಮಾಮೂಲು ಎಂಬಂತಾಗಿದೆ. ಇಂಥದ್ದೇ ಗಲಾಟೆಯೊಂದು ವಿಕೋಪಕ್ಕೆ ತಿರುಗಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ವಿದ್ಯಾರ್ಥಿಯ ಕಪಾಳಕ್ಕೆ ಕಂಡಕ್ಟರ್​ ಹೊಡೆದಿದ್ದಾರೆ ಎಂದು ಆರೋಪಿಸಿ ಹಾವೇರಿ ಬಸ್​ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ. ಬಸ್​​ನಲ್ಲಿ ಅನುಚಿತ ವರ್ತನೆ ತೋರಿದ್ದಕ್ಕಾಗಿ ಕಂಡಕ್ಟರ್​ ಥಳಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ ತಮ್ಮ ಮೇಲಿನ ಆರೋಪವನ್ನು ವಿದ್ಯಾರ್ಥಿ ತಳ್ಳಿ ಹಾಕಿದ್ದಾನೆ. ಕಂಡಕ್ಟರ್​ ತಾಳ್ಮೆ ಕಳೆದುಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾನೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮದ ಸುಳಿಯಲ್ಲಿ ಶಾಸಕರ ಪಿಎ! ದದ್ದಲ್​ಗೂ ಸಂಕಷ್ಟನಾ?

ಹಾವೇರಿ ಬಸ್​ ನಿಲ್ದಾಣದಲ್ಲಿ ವಿದ್ಯಾರ್ಥಿ ಪರವಾಗಿ ನೂರಾರು ಮಕ್ಕಳು ಜೊತೆಗೂಡಿ ಪ್ರತಿಭಟಿಸಿದ್ದಾರೆ. ಬಸ್​ ನಿಲ್ದಾಣದಿಂದ ಯಾವುದೇ ಬಸ್ ಹೋಗದಂತೆ ತಡೆದು ಕಂಡಕ್ಟರ್​, ಡ್ರೈವರ್​ ಅಮಾನತಿಗೆ ಒತ್ತಾಯಿಸಿದ್ದಾರೆ. ದಿಢೀರನೆ ಪ್ರತಿಭಟನೆಗೆ ದೂರದೂರಿಗೆ ಸಾಗುವ ಜನ ಕಂಗಾಲಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಕೊನೆಗೂ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

RELATED ARTICLES

Related Articles

TRENDING ARTICLES