Sunday, September 8, 2024

ಜೈಲಿನಲ್ಲಿರುವ ಇಬ್ಬರು ಮಕ್ಕಳ ಭೇಟಿಗೆ ಬಂದ ರೇವಣ್ಣ ಮತ್ತು ಭವಾನಿ ದಂಪತಿ

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಇಬ್ಬರು ಮಕ್ಕಳನ್ನು ಭೇಟಿಯಾಗಲು ಇಂದು ಹೊಳೆನರಸಿಪುರ ಶಾಸಕ ಹೆಚ್​.ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಆಗಮಿಸಿದ್ದರು.

ಇದನ್ನೂ ಓದಿ: ನಟ ದರ್ಶನ್​ ಭೇಟಿಗೆ ಬಂದ ಅಕ್ಕ, ಭಾವ ಮತ್ತು ಅಳಿಯ

ಅಶ್ಲೀಲ ವೀಡಿಯೋಗಳ ಪೆನ್​ಡ್ರೈವ್​ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅಸಹಜ ಲೈಂಗಿಕ ಪ್ರಕರಣದಲ್ಲಿ ವಿಧಾನ ಪರಿಷತ್​ ಸದಸ್ಯ ಸೂರಜ್​ ರೇವಣ್ಣ ಇಬ್ಬರು ಪರಪ್ಪನ ಅಗ್ರಹಾರದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡು ದಿನಗಳ ಹಿಂದಷ್ಟೆ ಇಬ್ಬರು ಸಹೋದರರನ್ನು ಮುಖ್ಯ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ಈ ಇಬ್ಬರು ಮಕ್ಕಳನ್ನು ಭೇಟಿಯಾಗಲು ಇದೇ ಮೊದಲ ಬಾರಿಗೆ ಹೆಚ್​.ಡಿ ರೇವಣ್ಣ ಹಾಗು ಭವಾನಿ ರೇವಣ್ಣ ಜೊತೆಯಾಗಿ ಒಂದೇ ಕಾರಿನಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ.

RELATED ARTICLES

Related Articles

TRENDING ARTICLES