Sunday, September 8, 2024

ಅರ್ಹರಿಗೆ ಮಾತ್ರ ಬಿಪಿಎಲ್​​ ಕಾರ್ಡ್​​​ ಸಿಗಲಿದೆ: ಸಿದ್ದರಾಮಯ್ಯ

ಬೆಂಗಳೂರು: ಅನರ್ಹರು ಬಿಪಿಎಲ್​ ಕಾರ್ಡ್​​​​ ಪಡೆದುಕೊಂಡಿದ್ರೆ ತೆಗದುಹಾಕಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹೊಸ ಬಿಪಿಎಲ್​​​​ ಕಾರ್ಡ್​​ಗಾಗಿ 2 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಅರ್ಹರಿಗೆ ಮಾತ್ರ ಬಿಪಿಎಲ್​ ಕಾರ್ಡ್​​​ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: BMW ಕಾರು ಅಪಘಾತ: ಪರಾರಿಯಾಗಿದ್ದ ಚಾಲಕನ ಬಂಧನ

ಯಾರ್ಯಾರಿಗೆ ಬಿಪಿಎಲ್​ ಕಾರ್ಡ್​ ನೀಡಬೇಕೆಂದು ಮೊದಲು ಸರ್ವೇ ಮಾಡಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಬಡತನ ಕಡಿಮೆಯಾಗಿದೆ ಎಂದು ನೀತಿ ಆಯೋಗ ತಿಳಿಸಿದೆ. ಆದರೆ ಬಿಪಿಎಲ್​ ಕಾರ್ಡ್​ಗಳ ಸಂಖ್ಯೆ ಕಡಿಮೆಯಾಗಿಲ್ಲ, ಬದಲಾಗಿ ಬಿಪಿಎಲ್​ ಕಾರ್ಡ್​​ಗಳ ಸಂಖ್ಯೆ ಹೆಚ್ಚಾಗಿವೆ ಕಳವಳ ವ್ಯಕ್ತಪಡಿಸಿದರತು.

ಇನ್ನು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳ ಸಭೆಯಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹಾವಳಿ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅನರ್ಹರ ಕಾರ್ಡ್ ರದ್ದುಪಡಿಸಿ ಅರ್ಹರಿಗೆ ಮಾತ್ರ ಸರಕಾರಿ ಯೋಜನೆಗಳ ಫಲ ದೊರೆಯುವಂತೆ ಎಚ್ಚರಿಕೆ ವಹಿಸಿ ಎಂದು ನಿರ್ದೇಶನ ನೀಡಿದ್ದರು.

RELATED ARTICLES

Related Articles

TRENDING ARTICLES