Sunday, September 8, 2024

ಬೆಂಗಳೂರಿನಲ್ಲಿ ಹೆಚ್ಚಾದ ಸಾಂಕ್ರಾಮಿಕ ರೋಗಗಳು

ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಆರ್ಭಟ ಹೆಚ್ಚಾಗಿದ್ದು, ಇದರ ಜೊತೆ ಝಿಕಾ ಸೇರಿದಂತೆ ನಾನಾ ವೈರಸ್​ಗಳ ಏರಿಕೆಯಾಗುತ್ತಿದೆ. ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ, ವಾಂತಿ ಪ್ರಕರಣಗಳು ಹೆಚ್ಚಾಗಿವೆ. ಬದಲಾದ ವಾತಾವರಣ ಹಿನ್ನಲೆ ಡೆಂಘೀ, ಟೈಫಾಯ್ಡ್​ ಜ್ವರ ಕೂಡಾ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆ ರಾಜ್ಯದಲ್ಲಿ ಮೆದಳು ತಿನ್ನುವ ಅಮೀಬಾ ವೈರಸ್ ಆತಂಕವು ಹೆಚ್ಚಾಗಿದ್ದು ಸರ್ಕಾರಿ ಆಸ್ಪತ್ರೆಗಳು ಹೈ ಅಲರ್ಟ್ ಆಗಿವೆ.

ಇದನ್ನು ಓದಿ: ಶ್ರೀರಾಂಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

ಡೆಂಘೀ ಹಾಗೂ ಝಿಕಾ ವೈರಸ್ ಎರಡು ರೋಗ ಲಕ್ಷಣಗಳಲ್ಲೂ ಸಾಮ್ಯತೆ ಇದ್ದು ವೈದ್ಯರು ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ. ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಮತ್ತಿತರ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ್ಯವಹಿಸದಂತೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ಬಹುತೇಕ ಸೋಂಕು ಪೀಡಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಇನ್ನು ಕೆಲವು ರೋಗಿಗಳಿಗೆ ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪದಲ್ಲಿದ್ದು, 2-7 ದಿನಗಳ ವರೆಗೆ ಕಂಡು ಬರ್ತಿದೆ. ಹೀಗಾಗಿ ವೈದ್ಯರು ಆರೋಗ್ಯ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಜ್ವರ ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯಲು ಎಚ್ಚರಿಕೆ ನೀಡಿದ್ದಾರೆ.

ಸದ್ಯ ರಾಜ್ಯದಲ್ಲಿ ಡೆಂಘಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಸೊಳ್ಳೆ ಉತ್ಪತಿಯನ್ನ ತಡೆಯಲು ಹಾಗೂ ಸೊಳ್ಳೆ ನಾಶಪಡಸಿಲು ಸಲಹೆ ನೀಡಿದ್ದು ಜ್ವರ ನಿಯಂತ್ರಣಕ್ಕೆ ತಪಾಸಣೆಗೆ ಸೂಕ್ತ ಮುನ್ನೆಚ್ಚರಿಕೆಗೂ ಸಲಹೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES