Sunday, September 8, 2024

ಸ್ಥಿತಿವಂತರು ಹೊಂದಿರುವ ಬಿಪಿಎಲ್​ ಕಾರ್ಡ್​ ರದ್ದು: ಸಚಿವ ಕೆ.ಹೆಚ್​ ಮುನಿಯಪ್ಪ

ಬೆಂಗಳೂರು: ರಾಜ್ಯಾದ್ಯಂತ ಸಾಕಷ್ಟು ಮಂದಿ ಸ್ಥಿತಿವಂತರೂ ಬಿಪಿಎಲ್​ ಕಾರ್ಡ್ ಹೊಂದಿರುವ  ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್​ ಮುನಿಯಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಜಿಲ್ಲಾಡಳಿಕ್ಕೆ ಆದೇಶವನ್ನು ನೀಡಲಾಗಿದೆ. ಆಹಾರ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್​, ಜಾಯಿಂಟ್​ ಡೈರೆಕ್ಟರ್​ಗಳು ಜಿಲ್ಲಾ ಮಟ್ಟದಲ್ಲಿ ಇದನ್ನು ಪರಿಶೀಲನೆ ನಡೆಸಲಿದ್ದಾರೆ. APL ಲಿಸ್ಟ್​ನಲ್ಲಿರಬೇಕಾದವರು BPL​ ಲಿಸ್ಟ್​​ನಲ್ಲಿದ್ದರೇ ಅಂಥವರನ್ನು ​BPL ನಿಂದ ತೆಗೆದು APL​ ಗೆ ಟ್ರಾನ್ಸಫರ್ ಮಾಡಲಾಗುತ್ತದೆ.​ ಆಗ ಅವರು APL​ ನಲ್ಲಿ ಸಿಗುವ ಅಕ್ಕಿ ಪಡಿತರವನ್ನು ಪಡೆದುಕೊಳ್ಳಬಹುದು ಎಂದರು.

ಇದನ್ನು ಓದಿ: ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್​ ಬೆಂಕಿಗಾಹುತಿ!

BPL​ ಕಾರ್ಡ್​ದಾರರಿಗೆ ಅದರದ್ದೇ ಆದ 30 ಮಾನದಂಡಗಳಿವೆ. ಆ  ಮಾನದಂಡಗಳ ಒಳಗೆ ಬಂದರೇ ಅವರಿಗೆ ನಾವು BPL​ ಸೌಲಭ್ಯ ನೀಡಲಿದ್ದೇವೆ. ಮಾನದಂಡಕ್ಕೆ ಅರ್ಹರಲ್ಲದಿದ್ದರೇ ಅವರನ್ನು ಎಪಿಎಲ್​ ಲಿಸ್ಟ್​ಗೆ ಸೇರಿಸಲಾಗುತ್ತದೆ ಎಂದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ಮತ್ತೆ ರಾಜಕೀಯ:

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಮುಂದೆ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದುವರೆಗೂ ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ, ಕೇಂದ್ರದವರು ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ನಾವು ಅಕ್ಕಿ ಬೇಕು ಎಂದು ಕೇಳಿದಾಗ ಅವರು ಕೊಡಲಿಲ್ಲ, ಅದಕ್ಕೆ ಬದಲಾಗಿ ನಾವು ಹಣ ಕೊಡುತ್ತಿದ್ದೇವೆ. ಕೇಂದ್ರದವರು ಈಗ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಈ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES