Sunday, September 8, 2024

ಐಸಿಸಿ ತಿಂಗಳ ಶ್ರೇಷ್ಠ ಆಟಗಾರರಾಗಿ ಬುಮ್ರಾ, ಸ್ಮೃತಿ ಮಂದಾನಗೆ ಮನ್ನಣೆ

ದುಬೈ: ಜೂನ್ ತಿಂಗಳ ಐಸಿಸಿ ಆಟಗಾರ ಗೌರವಕ್ಕೆ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಭಾಜನರಾಗಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಬಂಡತನದ ಸಮರ್ಥನೆ, ರಾಜೀನಾಮೆ ನೀಡಲೇಬೇಕು: ಸಿಟಿ ರವಿ

ಇದೇ ವೇಳೆ ಭಾರತದ ಸ್ಮೃತಿ ಮಂದಾನ ಜೂನ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್‌ ಅವರನ್ನು ಹಿಂದಿಕ್ಕಿ ಬೂಮ್ರಾ ಈ ಗೌರವಕ್ಕೆ ಅರ್ಹರಾಗಿದ್ದಾರೆ. ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ2-0 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ ಕಿರೀಟ ಮುಡಿಗೇರಿಸಿಕೊಂಡಿತ್ತು. ಟಿ20 ವಿಶ್ವಕಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಬೂಮ್ರಾ ಅವರಿಗೆ ಈ ಗೌರವ ಒಲಿದಿದೆ. 30 ವರ್ಷದ ಬೂಮ್ರಾ ಅವರು 8.26ರ ಸರಾಸರಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದರು. 4.17ರ ಎಕಾನಮಿ ಕಾಪಾಡಿಕೊಂಡಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಬೂಮ್ರಾ, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡ ಟ್ರೋಫಿ ಗೆಲ್ಲಲು ಕೊಡುಗೆ ನೀಡಲು ಸಾಧ್ಯವಾಗಿರುವುದು ನಿಜಕ್ಕೂ ವಿಶೇಷವೆನಿಸಿದೆ. ಈ ನೆನಪುಗಳು ಶಾಶ್ವತವಾಗಿರುತ್ತವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES