Sunday, September 8, 2024

ಜಿಮ್ಸ್ ಆಸ್ಪತ್ರೆಯಲ್ಲಿ ನಾಯಿಗಳ ಬಿಂದಾಸ್ ಓಡಾಟ

ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ನಾಯಿಗಳ ಓಡಾಟ ಹೆಚ್ಚಾಗಿದೆ. ಕಲಬುರಗಿಯ ಜಿಮ್ಸ್​​​ನ​​​​​​​​​ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಾಯಿಗಳು ಬಿಂದಾಸ್ ಓಡಾಟ ನಡೆಸಿವೆ.

ಇದನ್ನೂ ಓದಿ: ಸ್ಥಿತಿವಂತರು ಹೊಂದಿರುವ ಬಿಪಿಎಲ್​ ಕಾರ್ಡ್​ ರದ್ದು: ಸಚಿವ ಕೆ.ಹೆಚ್​ ಮುನಿಯಪ್ಪ

ರಾಜ್ಯದಲ್ಲಿ ಡೆಂಘೀ ಆರ್ಭಟ ಹೆಚ್ಚಾಗಿದ್ದು, ರೋಗಿಗಳು ಇರುವ ವಾರ್ಡ್‌ನಲ್ಲಿಯೇ ನಾಯಿಗಳು ಓಡಾಟ ನಡೆಸುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ ಏಲ್ಲಿ ನೋಡಿದರೂ ರಾಜಾರೋಷವಾಗಿ ನಾಯಿಗಳು ಓಡಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಮಾರು ನಾಯಿಗಳ ಗುಂಪು ಆಸ್ಪತ್ರೆಯ ರೋಗಿಗಳ ವಾರ್ಡ್‌ನಲ್ಲಿ ಓಡಾಡಿವೆ. ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಾಯಿಗಳ ಓಡಾಟದಿಂದ ರೋಗಿಗಳಲ್ಲಿ ಆತಂಕ ಹೆಚ್ಚಿದೆ. ಆಸ್ಪತ್ರೆಯಲ್ಲಿ ನಾಯಿಗಳ ಬಿಂದಾಸ್ ಓಡಾಟದ ದೃಶ್ವಯನ್ನ ಆಸ್ಪತ್ರೆಗೆ ಬಂದ ರೋಗಿಗಳು ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಜನರು ಕಿಡಿಕಾರಿದ್ದಾರೆ. ಅದಷ್ಟು ಬೇಗ ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸುವಂತೆ ಮನವಿಮಾಡಿದ್ದಾರೆ..

RELATED ARTICLES

Related Articles

TRENDING ARTICLES