Sunday, September 8, 2024

ಚಿನ್ನ ಗೆದ್ದು, ತಂದುಕೊಡುವೆ: ಮೋದಿಗೆ ಚೋಪ್ರಾ ವಾಗ್ದಾನ

ಜುಲೈ 26 ರಿಂದ ಶುರುವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್​ಗಾಗಿ ತೆರಳಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂವಾದ ನಡೆಸಿದ್ದಾರೆ. ಆನ್​ಲೈನ್​ನಲ್ಲಿ ನಡೆದ ಈ ಸಂವಾದ ವೇಳೆ ಪ್ರಧಾನಿ, ಕಳೆದ ಬಾರಿ ಸಿಹಿ ತಂದು ಕೊಡುತ್ತೇನೆ ಎಂದಿರುವ ತಮ್ಮ ಮಾತನ್ನು ಇನ್ನೂ ಸಹ ಈಡೇರಿಸಿಲ್ಲ ಎಂದು ನೀರಜ್ ಚೋಪ್ರಾಗೆ ನೆನಪಿಸಿದರು.

ಇದನ್ನು ಓದಿ: ವೈದ್ಯರಿಗೆ ನಟಿ ಸಮಂತಾ ತಿರುಗೇಟು; ಹೇಳಿದ್ದೇನು..?

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಿಮ್ಮ ಮನೆಯಲ್ಲಿ ತಯಾರಿಸಿದ ‘ಚುರ್ಮಾ’ ತಂದು ಕೊಡಬೇಕೆಂದು ತಿಳಿಸಿದ್ದರು. ಇದೇ ವೇಳೆ ಮುಂದಿನ ಬಾರಿ ತಂದು ಕೊಡುವುದಾಗಿ ನೀರಜ್ ಚೋಪ್ರಾ ಹೇಳಿದ್ದರು.

2020 ರಲ್ಲಿ ನಡೆದ ಈ ಮಾತುಕತೆಯನ್ನು ಇದೀಗ ಪ್ರಧಾನಿ ಮೋದಿ ಮತ್ತೆ ನೆನಪಿಸಿದ್ದಾರೆ. ಈ ವೇಳೆ ಈ ಸಲ ಖಂಡಿತವಾಗಿಯೂ ತಂದು ಕೊಡುತ್ತೇನೆ ಎಂದು ನೀರಜ್ ಚೋಪ್ರಾ ಮಾತು ನೀಡಿದ್ದಾರೆ. ಈ ಸಲ ಪದಕ ಗೆದ್ದು, ನಿಮ್ಮ ಮನೆಯಲ್ಲಿ ತಾಯಿ ತಯಾರಿಸಿದ ಚುರ್ಮಾ ತಂದುಕೊಡಬೇಕೆಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪ್ರಧಾನಿಯ ಕೋರಿಕೆಗೆ ನೀರಜ್ ಚೋಪ್ರಾ ಒಕೆ ಅಂದಿದ್ದು, ಈ ಸಲ ಚಿನ್ನದ ಪದಕದೊಂದಿಗೆ ಹಿಂತಿರುಗುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಿಮಗೆ ಚುರ್ಮಾ ತೆಗೆದುಕೊಂಡು ಬರುವುದಾಗಿ ಪಿಎಂ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES