Monday, July 8, 2024

ಡ್ರೈವರ್ ಹೆಸರು ನೋಡಿ ರೈಡ್ ಕ್ಯಾನ್ಸಲ್ ಮಾಡಿದ OLA ಪ್ರಯಾಣಿಕ!

ಕಡಿಮೆ ದರಗಳಲ್ಲಿ, ಕುಳಿತಲ್ಲಿಂದಲೇ ಕಾರು ಬುಕಿಂಗ್ ಮಾಡಿ ಸುಲಭವಾಗಿ ಪ್ರಯಾಣ ಮಾಡಬಹುದು. ಗ್ರಾಹಕರ ಸುರಕ್ಷತೆಗೆ ಆ್ಯಪ್ ಟ್ಯಾಕ್ಸಿ ಸೇವೆಗಳು ಹಲವು ಫೀಚರ್ಸ್ ನೀಡಿದೆ. ಈ ಪೈಕಿ ರೈಡ್ ಕ್ಯಾನ್ಸಲ್ ಮಾಡುವ ಅವಕಾಶವನ್ನೂ ನೀಡಿದೆ. ಇಲ್ಲೊಬ್ಬ ಓಲಾ ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಬಳಿಕ ಚಾಲಕನ ಹೆಸರು ನೋಡಿದ ಪ್ರಯಾಣಿಕ ರೈಡ್ ಕ್ಯಾನ್ಸಲ್ ಮಾಡಿದ್ದಾನೆ.

ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಕಂಪನಿಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ರೈವರ್ ಹೆಸರುಗಳು ಮತ್ತು ಸ್ಥಳಗಳ ಬಗ್ಗೆ ಮೊದಲೇ ಮಾಹಿತಿ ನೀಡುತ್ತವೆ. ಹಾಗೇ ಇದರಲ್ಲಿ ಗ್ರಾಹಕರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಆದರೆ ಈ ಸುರಕ್ಷತೆಯ ಸೌಲಭ್ಯಗಳು ಈಗ ಕ್ಯಾಬ್ ಕಂಪನಿಗಳಿಗೆ ಸಮಸ್ಯೆಯನ್ನುಂಟುಮಾಡಿದೆ. ಯಾಕೆಂದರೆ ಕ್ಯಾಬ್ ಡ್ರೈವರ್ ಹೆಸರು ತಿಳಿದು ವ್ಯಕ್ತಿಯೊಬ್ಬ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದಾರೆ. ಈ ವಿಷಯ ಎಲ್ಲೆಡೆ ವೈರಲ್ ಆಗಿದೆ.

ಇದನ್ನು ಓದಿ; ಇವಳೇನು ಶಿಕ್ಷಕಿಯೋ ಕಾಮುಕಿಯೋ 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ..!

ಯಮರಾಜ ಆಗಮಿಸಿದ್ದಾನೆ. ನಿಮ್ಮ ಲೋಕೇಶನ್‌ನಲ್ಲಿ ಕಾಯುತ್ತಿದ್ದಾರೆ ಎಂದು ಓಲಾದಿಂದ ಸಂದೇಶ ಬಂದಿದೆ. ಈ ಸಂದೇಶ ನೋಡಿದ ಪ್ರಯಾಣಿಕ ರೈಡ್ ಕ್ಯಾನ್ಸಲ್ ಮಾಡಿದ್ದಾನೆ. ಬಳಿಕ ನಾನು ಮಲಗುತ್ತಿದ್ದೇನೆ ಎಂದು ಕಾರಣವನ್ನೂ ನೀಡಿದ್ದಾನೆ.

ಇದನ್ನು ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಓಲಾದಿಂದ ಬಂದ ಸಂದೇಶದ ಸ್ಕ್ರೀನ್‍ಶಾಟ್ ಆಗಿದೆ. ಅದರಲ್ಲಿ “ಯಮರಾಜ ಆಗಮಿಸಿದ್ದಾರೆ ಮತ್ತು ನಿಮ್ಮ ಸ್ಥಳದಲ್ಲಿ ಕಾಯುತ್ತಿದ್ದಾರೆ” ಎಂದು ಬರೆಯಲಾಗಿತ್ತು. ಈ ಬಗ್ಗೆ ನೀಡಿದ ವಿವರಣೆಯಲ್ಲಿ ಕರ್ನಾಟಕದಲ್ಲಿ ಯಾರೋ ಒಬ್ಬರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕನ ಹೆಸರು ʼಯಮರಾಜʼ ಎಂದು ನೋಡಿದ ನಂತರ ಅದನ್ನು ರದ್ದುಗೊಳಿಸಿದರು ಎನ್ನಲಾಗಿದೆ.

RELATED ARTICLES

Related Articles

TRENDING ARTICLES