Monday, July 8, 2024

T20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಲಂಡನ್ನಲ್ಲಿ ಶಾಶ್ವತ ನೆಲಸಲು ಕೊಹ್ಲಿ ತಯಾರಿ!

ಟೀಂ ಇಂಡಿಯಾದ ಕಿಂಗ್ ಕೊಹ್ಲಿ, ಈಗ ವಿಶ್ವ ಕ್ರಿಕೆಟ್ನ ಕಿಂಗ್. ಇತ್ತೀಚಿನ ಟಿ20 ವಿಶ್ವಕಪ್ ಗೆಲುವಿನ ನಂತರ ಟಿ20 ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದು ಭಾರತ ಬಿಟ್ಟು ಲಂಡನ್​ಗೆ ತೆರಳಿ ಅಲ್ಲೇ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಿಧಾನವಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳುತ್ತಿದ್ದಾರೆ ಎಂಬ ವದಂತಿಗಳಿಂದ ಇಂಟರ್ನೆಟ್ ಹೊತ್ತಿ ಉರಿಯುತ್ತಿದೆ. ಈ ವದಂತಿಗಳಿಗೆ ಪುಷ್ಟಿ ಎಂಬಂತೆ ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆಯ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಲು ಕೊಹ್ಲಿ ತಕ್ಷಣವೇ ಲಂಡನ್‌ಗೆ ತೆರಳಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಭಾರತದಿಂದ ಹೊರಹೋಗಲು ಮತ್ತು ಯುಕೆಯಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರವಾಗಿ ಕಾಣುತ್ತಿದೆ ಈ 4 ಆಂಶಗಳು.

ಯುಕೆಯಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ ಕಿಂಗ್ ಕೊಹ್ಲಿ:

ಕಳೆದ ಕೆಲವು ತಿಂಗಳುಗಳಲ್ಲಿ, ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಲಂಡನ್ ಮತ್ತು ಸುತ್ತಮುತ್ತ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 2023 ರಲ್ಲಿ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಕ್ರಿಕೆಟ್‌ನಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡರು ಮತ್ತು ಯುಕೆಗೆ ಹಾರಿದರು. ನಂತರ ಕೊಹ್ಲಿ ಮತ್ತು ಅನುಷ್ಕಾ ಲಂಡನ್ ನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ರು. ಈ ವರ್ಷದ ಫೆಬ್ರವರಿಯಲ್ಲಿ, ಕೊಹ್ಲಿ ಮತ್ತೆ ಲಂಡನ್‌ನಲ್ಲಿ ತಮ್ಮ ಮಗಳು ವಾಮಿಕಾ ಅವರೊಂದಿಗೆ ಕಾಣಿಸಿಕೊಂಡರು. ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಗ ಅಕಾಯ್‌ನ ಜನನವನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಲಂಡನ್ ರೆಸ್ಟೋರೆಂಟ್‌ನಲ್ಲಿ ತಂದೆ-ಮಗಳ ಜೋಡಿಯ ಫೋಟೋ ವೈರಲ್ ಆಗಿತ್ತು.ಅರ್ಥಾತ್, ಇತ್ತೀಚೆಗೆ ಅತೀ ಹೆಚ್ಚು ಸಮಯವನ್ನ ಕೊಹ್ಲಿ ಲಂಡನ್ನಲ್ಲಿ ಕಳೆಯುತ್ತಿದ್ದಾರೆ.

ಅಕಾಯ್ ಜನಿಸಿದ್ದು ಲಂಡನ್‌ನಲ್ಲಿ?:

ಫೆಬ್ರವರಿ 20 ರಂದು ವಿರಾಟ್ ಮತ್ತು ಅನುಷ್ಕಾ ತಮ್ಮ ಗಂಡು ಮಗುವಿನ ಜನನವನ್ನು ಘೋಷಿಸಿದರು ಮಗು ಜನಿಸಿದ ಐದು ದಿನಗಳ ನಂತರ. ಆದರೆ ಆ ಮಗು ಜನನವಾಗಿದ್ದು ಭಾರತದಲ್ಲಲ್ಲ ಅನ್ನೋದು ಗಮನಾರ್ಹ. ಅಕಾಯ್ ಕೊಹ್ಲಿ ಹೆರಿಗೆ ಆಗಿದ್ದು ಭಾರತದ ಹೊರಗೆ ಅನ್ನೋದಕ್ಕೆ ಆ ಸಮಯದಲ್ಲಿ ಪ್ರಕಟವಾದ ಹಲವಾರು ವರದಿಗಳು ಸಾಕ್ಷಿಯಾಗಿ ಅಕಾಯ್ ಕೊಹ್ಲಿ ಯುಕೆ ಆಸ್ಪತ್ರೆಯಲ್ಲಿ ಜನಿಸಿದ್ದು ಎಂದು ಸೂಚಿಸಿವೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಕೊಹ್ಲಿ ಮದ್ಯದಲ್ಲೆ ಬಿಟ್ಟು, ಮಗನ ಜನನದ ಸಂಭ್ರಮಕ್ಕಾಗಿ, ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ರು ಎಂದು ವರದಿಗಳು ತಿಳಿಸಿದ್ದವು. ತಮ್ಮ ಮಗನ ಜನನದ ಕೆಲವು ದಿನಗಳ ನಂತರ ಲಂಡನ್‌ನಲ್ಲಿ ಕೊಹ್ಲಿ ತನ್ನ ಮಗನ ಜೊತೆಗಿನ ಫೋಟೋ ಹಂಚಿಕೊಂಡಿದ್ಗದರು.. ಇದು ಮತ್ತೆ ಈ ವದಂತಿಗಳನ್ನು ಬಲಪಡಿಸಿತು

ಹೆಚ್ಚು ‘ಸಾಮಾನ್ಯ’ ಜೀವನ:

ವಿರಾಟ್ ಸಂದರ್ಶನವೊಂದರಲ್ಲಿ ಹೇಳಿರೊ ಮಾತು ಇಲ್ಲಿ ಉಲ್ಲೇಖಿಸಲೇ ಬೇಕು. ಯೂರೋಪ್ನಲ್ಲಿ ಇರೋದಕ್ಕೆ ನಂಗಿಷ್ಟ.. ಯಾಕಂದ್ರೆ ಅಲ್ಲಿ ನಮ್ಮನ್ನ ಯಾರು ಗುರುತಿಸೋದಿಲ್ಲ. ಒಂದು ಸಾಮಾನ್ಯ ಜೀವನ ಸಾಗಿಸಲು ಸಾದ್ಯವಾಗುತ್ತೆ. ನನಗೆ ಸಾಮಾನ್ಯ ಜೇವನ ನಡೆಸುವುದೆಂದರೆ ತುಂಬಾ ಇಷ್ಟ ಅಂತಾ ಸ್ವತಃ ಕೊಹ್ಲಿ ಹೇಳಿಕೊಂಡಿದ್ದರು.

ನಾವು ದೇಶದಲ್ಲಿ ಇರಲಿಲ್ಲ. ಎರಡು ತಿಂಗಳ ಕಾಲ ಸಾಮಾನ್ಯ ಭಾವನೆ – ನನಗೆ, ನನ್ನ ಕುಟುಂಬಕ್ಕೆ- ಇದು ಅತಿವಾಸ್ತವಿಕ ಅನುಭವವಾಗಿದೆ. ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶಕ್ಕಾಗಿ ದೇವರಿಗೆ ಹೆಚ್ಚು ಕೃತಜ್ಞರಾಗಿದ್ದೇನೆ. ರಸ್ತೆಯಲ್ಲಿ ಒಬ್ಬ ಸಾಮನ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳವ ಅನುಭವ ಸುಂದರ” ಎಂದು ಕೊಹ್ಲಿ ಹೇಳಿಕೊಂಡಿದ್ದರು.

ಯುಕೆ-ಲಿಸ್ಟೆಡ್ ಕಂಪನಿಯನ್ನು ಹೊಂದಿದ್ದಾರೆ ಕೊಹ್ಲಿ ಮತ್ತು ಅನುಷ್ಕಾ..!:

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮ್ಯಾಜಿಕ್ ಲ್ಯಾಂಪ್ನ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ.
UK ಸರ್ಕಾರದ ಫೈಂಡ್ ಮತ್ತು ಅಪ್ಡೇಟ್ ಕಂಪನಿ ಮಾಹಿತಿ ಸೇವೆಯ ಪ್ರಕಾರ, ಮ್ಯಾಜಿಕ್ ಲ್ಯಾಂಪ್ ಒಂದು ನಿರ್ವಹಣಾ ಸಲಹಾ ಸಂಸ್ಥೆಯಾಗಿದ್ದು, ಇದನ್ನು ಆಗಸ್ಟ್ 1, 2022 ರಂದು ಸ್ಥಾಪಿಸಲಾಗಿದೆ. ಕಂಪನಿಯ ಮೂವರು ನಿರ್ದೇಶಕರಲ್ಲಿ ಕೊಹ್ಲಿ ಮತ್ತು ಅನುಷ್ಕಾ ಕೂಡಾ ಇದ್ದಾರೆ ಅನ್ನೋದು ಈಗಾಗಲೇ ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES