Monday, July 8, 2024

1983ರ ಕಷ್ಟಕಾಲದಲ್ಲಿ BCCIಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್​​

ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವು ನಿನ್ನೆ ಭಾರತಕ್ಕೆ ವಾಪಸ್​​​ ಆಗಿದೆ.. BCCI ಕೂಡಾ ಗೆದ್ದ ತಂಡಕ್ಕೆ 125 ಕೋಟಿ ರೂ.ಗಳ ಬೃಹತ್ ಮೊತ್ತದ ಬಹುಮಾನ ಘೋಷಿಸಿದೆ. ಆದರೆ ಭಾರತವು ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ಅಂದರೆ 1983ರಲ್ಲಿ ಚಾಂಪಿಯನ್ ಆಟಗಾರರಿಗೆ ಹಣ ನೀಡಲೂ BCC ಬಳಿ ಶಕ್ತಿ ಇರಲಿಲ್ಲ ಎಂದು ತಿಳಿದು ಬಂದಿದೆ..

ಇದನ್ನ ಓದಿ;ಡ್ರೈವರ್ ಹೆಸರು ನೋಡಿ ರೈಡ್ ಕ್ಯಾನ್ಸಲ್ ಮಾಡಿದ OLA ಪ್ರಯಾಣಿಕ!

1983ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕಪಿಲ್ ಡೆವಿಲ್ಸ್ ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಗೆಲುವು ಸಾಧಿಸಿದ್ದರು. ಕ್ರಿಕೆಟ್ ವಿಶ್ವಕ್ಕೆ ಅಚ್ಚರಿ ನೀಡಿದ್ದ ಕಪಿಲ್ ದೇವ್ ಬಳಗವು ಲಾರ್ಡ್ಸ್ ಮೈದಾನದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿ ಮೊದಲ ಬಾರಿಗೆ ಕ್ರಿಕೆಟ್ ಭೂಪಟದಲ್ಲಿ ಭಾರತದ ಧ್ವಜವನ್ನು ಅಧಿಕಾರಯುತವಾಗಿ ನೆಟ್ಟಿತ್ತು. ಭಾರತದ ಕ್ರಿಕೆಟ್ ಬೆಳವಣಿಗೆಯ ಬೀಜ ಮೊಳಕೆಯೊಡೆದಿದ್ದು ಅಲ್ಲಿಂದ ನೋಡಿ.

ಕಪಿಲ್ ದೇವ್ ಅವರು ಲಾರ್ಡ್ಸ್ ಬಾಲ್ಕನಿಯಲ್ಲಿ ಟ್ರೋಫಿ ಎತ್ತುತ್ತಿದ್ದಂತೆ ಇಡೀ ಭಾರತ ಕುಣಿದಾಡಿತ್ತು, ಆದರೆ ಆಗಿನ ಬಿಸಿಸಿಐ ಅಧ್ಯಕ್ಷ, ಇಂದಿರಾ ಗಾಂಧಿ ಕ್ಯಾಬಿನೆಟ್ ನ ಪವರ್ ಫುಲ್ ಮಿನಿಸ್ಟರ್ ಎನ್.ಕೆ.ಪಿ ಸಾಳ್ವೆ ಅವರಿಗೆ ಚಿಂತೆ ಕಾಡುತ್ತಿತ್ತು. ಆಗ ಭಾರತದಲ್ಲಿನ್ನೂ ಆರ್ಥಿಕ ಉದಾರೀಕರಣ ಆಗಿರಲಿಲ್ಲ. ಕ್ರಿಕೆಟ್ ಉದ್ಯಮವೂ ಆಗಿರಲಿಲ್ಲ. ಭಾರತ ತಂಡದ ಮಹಾನ್ ಸಾಧನೆಯನ್ನು ಸಂಭ್ರಮಾಚರಣೆ ಮಾಡಬೇಕಾದ BCCI ಬಳಿ ಹಣವೇ ಇರಲಿಲ್ಲವಂತೆ.

ಅಂದು ಬಿಸಿಸಿಐ ತನ್ನ ಮಾನ ಉಳಿಸಿಕೊಳ್ಳಲು ಲತಾ ಮಂಗೇಡ್ಕರ್ ಅವರ ಸಹಾಯ ಕೋರಿತ್ತು. ಲತಾ ಮಂಗೇಡ್ಕರ್ ಅವರಿಂದ ಗಾಯನ ಕಾರ್ಯಕ್ರಮ ನಡೆಸಿ ಅದರಿಂದ ಬರುವ ಹಣವನ್ನು ಆಟಗಾರರಿಗೆ ನೀಡುವ ಯೋಜನೆ ಸಾಳ್ವೆ ಮತ್ತು ರಾಜ್ ಭಾಯ್ ಅವರದ್ದು. ಸ್ವತಃ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದ ಲತಾ ಅವರು ಈ ವಿಷಯವನ್ನು ತಿಳಿದ ಕೂಡಲೇ ಕಾರ್ಯಕ್ರಮ ನೀಡಲು ಒಪ್ಪಿಗೆ ನೀಡಿದ್ದರು.

ಇದನ್ನ ಓದಿ; ಪ್ರಧಾನಿ ಹುದ್ದೆಗೆ ರಿಷಿ ರಾಜೀನಾಮೆ, ಕೀರ್ ಸ್ಟಾರ್ಮರ್ ನೂತನ ಪ್ರಧಾನಿ

ಅದರಂತೆ ಹೊಸದಿಲ್ಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಲತಾ ಮಂಗೇಡ್ಕರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಸ್ಟೇಡಿಯಂನಲ್ಲಿ ತುಂಬಿ ತುಳುಕಿದ್ದ ಪ್ರೇಕ್ಷಕರ ಎದುರು ಲತಾ ಅವರು ಎರಡು ಗಂಟೆಗಳ ಕಾರ್ಯಕ್ರಮ ನೀಡಿದ್ದರು. ಅಲ್ಲಿ ಅಂದು ಭಾರತೀಯ ಕ್ರಿಕೆಟಿಗರು ಸೇರಿದ್ದರು. ಲತಾ ಅವರ ಸಹೋದರ ಪಂಡಿತ್ ಹೃದ್ಯಾಂತ್ ಮಂಗೇಶ್ವರ್ ಅವರು ಸಂಯೋಜನೆ ಮಾಡಿದ ಭಾರತ ವಿಶ್ವ ವಿಜೇತ ಎಂಬ ವಿಶೇಷ ಹಾಡನ್ನು ಅಂದು ಲತಾ ಮಂಗೇಶ್ವ‌ರ್ ಹಾಡಿದ್ದರು.

ಅಂದಿನ ಕಾರ್ಯಕ್ರಮದಲ್ಲಿ ಸುಮಾರು 20 ಲಕ್ಷ ರೂ ಗಳು ಒಟ್ಟಾಗಿತ್ತು. ಟೀಂ ಇಂಡಿಯಾದ ಆಟಗಾರರಿಗೆ ತಲಾ ಒಂದು ಲಕ್ಷ ರೂ ನೀಡಲಾಗಿತ್ತು. ವಿಶೇಷ ಏನೆಂದರೆ ಭಾರತೀಯ ಕ್ರಿಕೆಟ್ ಮಂಡಳಿಗೆ ಇಷ್ಟೆಲ್ಲಾ ಮಾಡಿದ ಲತಾ ಮಂಗೇಷ್ಕರ್ ಅವರು ಸಂಭಾವನೆಯಾಗಿ ಒಂದೇ ಒಂದು ರೂಪಾಯಿ ಕೂಡಾ ಪಡೆಯಲಿಲ್ಲ. ಬಹುಶಃ ಇಂತಹ ಪ್ರಸಂಗಗಳಿಂದಲೇ ಕೆಲವರು ದೊಡ್ಡವರಾಗುತ್ತಾರೆ…

ಅವಮಾನದಿಂದ ತನ್ನನ್ನು ಪಾರು ಮಾಡಿದ ಲತಾ ಅವರ ಉಪಕಾರವನ್ನು ಬಿಸಿಸಿಐ ಮರೆಯಲಿಲ್ಲ. ಅಂದಿನಿಂದ ಲತಾ ಮಂಗೇಶ್ವರ್ ಅವರು ನಿಧನರಾಗುವವರೆಗೂ ಭಾರತದ ಎಲ್ಲಾ ಸ್ಟೇಡಿಯಂಗಳಲ್ಲಿ ಎರಡು ವಿಐಪಿ ಸೀಟ್ ಗಳನ್ನು ಅವರಿಗೆ ಮೀಸಲಿಡಲಾಗುತ್ತಿತ್ತು ಮೂಲ ಮಾಹಿತಿಯಿಂದ ತಿಳಿದುಬಂದಿದೆ.

RELATED ARTICLES

Related Articles

TRENDING ARTICLES