Monday, July 8, 2024

ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಅಭ್ಯರ್ಥಿ ನಾನೇ- ಸಿ.ಪಿ ಯೋಗೇಶ್ವರ್​

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಾನೇ ಎಂದು ಮಾಜಿ ಶಾಸಕ ಸಿಪಿ ಯೋಗೇಶ್ವರ್​ ಅವರು ತಿಳಿಸಿದ್ದಾರೆ.

ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವಾರ ನಾನು ಕುಮಾರಸ್ವಾಮಿಯರನ್ನು ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡಿದ್ದೇನೆ, ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ, ಈಗಾಗಲೇ ಕಾಂಗ್ರೆಸ್​ ಉಪಚುನಾವಣೆಗೆ ತಯಾರಿ ನಡೆಸುತ್ತಿದೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ:  ಡೆಂಘೀ ಹೆಚ್ಚಳ; ಸ್ವಚ್ಛತೆ ನಿರ್ಲಕ್ಷ್ಯವಹಿಸಿದ್ರೆ BBMPಯಿಂದ ಫೈನ್​​​

ಈ ವೇಳೆ ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನೆ ಕಣಕ್ಕಿಳಿಯುವಂತೆ ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು ಜೊತೆಗೆ ಮೈತ್ರಿ ಪಕ್ಷದ ವರಿಷ್ಟರು ಅಧಿಕೃತ ಘೋಷಣೆ ಮಾಡಬೇಕು ಹೀಗಾಗಿ ನೀವೇ ಬಂದು ಹೆಸರನ್ನು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ ಎಂದರು.

ಸರ್ಕಾರದ ಹಣದಿಂದ ಉಪಚುನಾವಣೆ ಮಾಡ್ತಿದ್ದಾರೆ:

ಚನ್ನಪಟ್ಟಣ ಉಪಚುನಾವಣೆಗೆ ಸರ್ಕಾರದ ಹಣ ಬಳಕೆ ಮಾಡಲು ಕಾಂಗ್ರೆಸ್​ ಸರ್ಕಾರ ತಯಾರಿ ನಡೆಸುತ್ತಿದೆ. ಡಿಕೆ ಶಿವಕುಮಾರ್​ ಕನಕಪುರದಿಂದ ಗೆದ್ದು ರಾಮನಗರ ಉಸ್ತುವಾರಿ ತೆಗೆದುಕೊಂಡಿಲ್ಲ, ಬದಲಿಗೆ ಬೆಂಗಳೂರು ಉಸ್ತುವಾರಿಯನ್ನು ತೆಗೆದುಕೊಂಡಿರೋದು ಯಾಕೆ? ಈಗ ಚುನಾವಣೆ ಸಂದರ್ಭದಲ್ಲಿ ಮಾತ್ರ ಚನ್ನಪಟ್ಟಣ ನನಪಾಗಿರೋದಾ? ಎಂದು ಪ್ರಶ್ನೆ ಮಾಡಿದರು. ಚನ್ನಪಟ್ಟಣ ಜನರು ಬುದ್ದಿವಂತರಿದ್ದಾರೆ, ಇಂತಹ ನಾಟಕಗಳಿಗೆ ನಮ್ಮ ಜನ ಉತ್ತರ ಕೊಡ್ತಾರೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES