Saturday, July 6, 2024

ಮಗ ಪ್ರಜ್ವಲ್​ನನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ರೇವಣ್ಣ

ಬೆಂಗಳೂರು: ಅಶ್ಲೀಲ ವೀಡಿಯೋಗಳ ಪೆನ್​ಡ್ರೈವ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ    ಹಾಸನದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣರನ್ನು ಭೇಟಿಯಾಗಲು ಪ್ರಜ್ವಲ್​ ತಂದೆ ಹಾಗು ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್​.ಡಿ ರೇವಣ್ಣ ಅವರು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ.

ಪೆನ್​ಡ್ರೈವ್​ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪ್ರಜ್ವಲ್​ ರೇವಣ್ಣ ಅವರು ಇತ್ತೀಚೆಗೆ ವಿಶೇಷ ತನಿಖಾ ತಂಡದ ಕಸ್ಟಡಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಈ ನಡುವೆ ಪ್ರಜ್ವಲ್ ತಂದೆ ರೇವಣ್ಣ ಮಗನ ಯೋಗಕ್ಷೇಮ ವಿಚಾರಿಸಲು ಆಗಮಿಸಿದ್ದಾರೆ.

ಇದನ್ನೂ ಓದಿ: ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ: ಹೆಚ್.ಡಿ ರೇವಣ್ಣ

ಇನ್ನು, ಮಗನನ್ನು ಕಾಣಲು ಎರಡು ದಿನಗಳ ಹಿಂದೆಯಷ್ಟೆ ಪ್ರಜ್ವಲ್​ ರೇವಣ್ಣ ಪತ್ನಿ ಹಾಗು ಪ್ರಜ್ವಲ್​ ರೇವಣ್ಣ ತಾಯಿ ಆಗಮಿಸಿದ್ದರು. ಇವರು ಬಂದು ಹೋಗ ಬೆನಲ್ಲೇ ಇದೀಗ ಹೆಚ್​.ಡಿ ರೇವಣ್ಣ ಆಗಮಿಸಿದ್ದಾರೆ.

ಸದ್ಯ ಮಗನನ್ನು ಭೇಟಿಯಾಗಲ್ಲ ಎಂದಿದ್ದ ರೇವಣ್ಣ ಇಂದು ಭೇಟಿಗೆ ಆಗಮನ:

ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಅಂತಾ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದರು. ಮೈಸೂರಿನಲ್ಲಿ ಮಾತನಾಡಿದ ಅವರು, ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು ಎಂದು ಮಾತು ಆರಂಭಿಸಿದ ರೇವಣ್ಣ, ನಿನ್ನೆ ನನ್ನ ಪತ್ನಿ ಹೋಗಿದ್ದಾರೆ, ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದಿದ್ದರು.

RELATED ARTICLES

Related Articles

TRENDING ARTICLES