Saturday, July 6, 2024

ಮಕ್ಕಳ ಕ್ಯೂಟ್ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್​​​​ನಲ್ಲಿ ಮಕ್ಕಳ ಕ್ಯೂಟ್ ಫೋಟೋ ಶೇರ್​​​ ಮಾಡಿದ್ದಾರೆ… ಐರಾ ಗಾಗೂ ಯಥರ್ವ ಯಶ್ ಇಬ್ಬರ ಒಂದೇ ಫ್ರೇಮ್ ಫೋಟೋ ಹಂಚಿಕೊಂಡ ರಾಧಿಕಾ, ಅವರ ಪಾದಗಳು ನಮ್ಮ ಶೂಗಳಿಗೆ ಸರಿಹೊಂದುತ್ತಿಲ್ಲ. ಆದರೆ ಇವರಿಬ್ಬರ ಆ್ಯಟಿಟ್ಯೂಡ್ ಸರಿಯಾಗಿ ಫಿಟ್ ಆಗುತ್ತಿದೆ ಎಂದು ರಾಧಿಕ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಕ್ಸ್​​​​​​​ ಆಫೀಸ್​​​​ನಲ್ಲಿ ‘ಕಲ್ಕಿ 2898 ಎಡಿ’ ಅಬ್ಬರ ಗಳಿಸಿದ್ದೇಷ್ಟು..?

ಮಗ ಯಥರ್ವ ಯಶ್ ರಾಕಿಂಗ್ ಸ್ಟಾರ್ ಯಶ್ ರೀತಿ ಪೋಸ್ ನೀಡಿದ್ದರೆ, ಪುತ್ರಿ ಐರಾ, ಸೇಮ್ ರಾಧಿಕಾ ಪಂಡಿತ್ ರೀತಿ ಪೋಸ್ ನೀಡಿದ್ದಾರೆ. ಇವರಿಬ್ಬರ ಆ್ಯಟಿಟ್ಯೂಡ್ ಮಾತ್ರ ಪೋಷಕರ ರೀತಿಯೇ ಇದೆ. ಹಲವರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಇಬ್ಬರು ಪೋಷಕರ ಆ್ಯಟಿಟ್ಯೂಡ್ ತೋರಿಸಿದ್ದಾರೆ ಎಂದಿದ್ದಾರೆ. ಜ್ಯೂನಿಯರ್ ಯಶ್ ಹಾಗೂ ರಾಧಿಕಾ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಈ ಫೋಟೋ ತೆಗೆದವರು ಯಾರು ಯಶ್ ಅಥವಾ ರಾಧಿಕಾ ಎಂದು ಪ್ರಶ್ನಿಸಿದ್ದಾರೆ.

ಮದುವೆ ಬಳಿಕ ರಾಧಿಕಾ ಪಂಡಿತ್ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಇಬ್ಬರು ಮಕ್ಕಳ ಪಾಲನೆ ಮಾಡುತ್ತಾ, ಮನೆಯ ಜವಾಬ್ದಾರಿ, ಯಶ್ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಸಿನಿ ಕ್ಷೇತ್ರದಿಂದ ದೂರ ಉಳಿದರೂ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಸಕ್ರಿಯವಾಗಿದ್ದಾರೆ. ಸದಾ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಬಾರಿ ಇಬ್ಬರು ಮಕ್ಕಳ ಪೋಟೋ ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಕ್ಯೂಟ್ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ.

 

View this post on Instagram

 

A post shared by Radhika Pandit (@iamradhikapandit)

RELATED ARTICLES

Related Articles

TRENDING ARTICLES