Saturday, July 6, 2024

ವಿಪಕ್ಷದವರಿಗೆ ನೀರು ಕೊಟ್ಟ ಮೋದಿ

ದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದ ವೇಳೆ ಅವರ ವಿರುದ್ಧ ಘೋಷಣೆ ಕೂಗುತ್ತಿದ್ದ ವಿರೋಧ ಪಕ್ಷದ ನಾಯಕರಿಗೆ ಮೋದಿ ನೀರು ಕೊಟ್ಟಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸಾವಿನ ಸತ್ಸಂಗ..! ಯಾರು ಈ ಭೋಲೆ ಬಾಬಾ?

ಈ ಸಮಯದಲ್ಲಿ ಮೋದಿ ಕಾಂಗ್ರೆಸ್ ಅನ್ನು ಅರಾಜಕತೆಯನ್ನು ಹರಡುವ ಪಕ್ಷ ಎಂದು ಕರೆದರು, ಎಷ್ಟೇ ಆಲೋಚಿಸಿದರೂ ನಿಮ್ಮ ಉದ್ದೇಶ ಎಂದೂ ಈಡೇರುವುದಿಲ್ಲ ಅಂತಾ ಹೇಳಿದರು. ಆ ಸಮಯದಲ್ಲಿ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಪ್ರಧಾನಿ ಮೋದಿ ನಾಯಕರಿಗೆ ಒಂದು ಲೋಟ ನೀರು ನೀಡಿದರು.

ಈ ಪೋಸ್ಟ್ ಅನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES