Friday, July 5, 2024

ರಾಜ್ಯದಲ್ಲಿ ಡೆಂಘೀ ಕೇಸ್​​​​​​ ಹೆಚ್ಚಳ; ಅಲರ್ಟ್​​ ಆದ ನಮ್ಮ ಮೆಟ್ರೋ

ಕರ್ನಾಟಕದಾದ್ಯಂತ ಡೆಂಘೀ ಹರಡುವಿಕೆ ತೀವ್ರಗೊಂಡಿದ್ದು, ಬೆಂಗಳೂರು ರಾಜ್ಯದಲ್ಲೇ ನಂಬರ್ 1 ಆಗಿದೆ. ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇದೀಗ ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಟ ಮಾಡುವವರಿಗೂ ಆಂತಕ ಶರುವಾಗಿದೆ. ಇದರ ಬೆನ್ನಲ್ಲೇ ಬಿಎಂಆರ್​​ಸಿಎಲ್ ಕೂಡ ಎಚ್ಚೆತ್ತುಕೊಂಡಿದ್ದು, ನಮ್ಮ ಮೆಟ್ರೋ ನಿಲ್ದಾಣ ಸುತ್ತಮುತ್ತ ಹಾಗೂ ಕಚೇರಿ ಸುತ್ತಮುತ್ತ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ: ಸತ್ಸಂಗದಲ್ಲಿ 2.50 ಲಕ್ಷ ಭಕ್ತರು..! ಬಾಬಾ ಪಾದದ ಧೂಳಿಗೆ ಮುಗಿಬಿದ್ದು ಕಾಲ್ತುಳಿತಕ್ಕೆ ಸತ್ತವರು 121 ಮಂದಿ.!!

ಮೆಟ್ರೋ ಆವರಣದಲ್ಲಿ, ಕಚೇರಿ ಸುತ್ತಮುತ್ತ ನಿಂತ ನೀರು, ಮಳೆ ನೀರು, ಹಸಿ ಕಸ, ಸೊಳ್ಳೆಗಳ ಮೊಟ್ಟೆ ಶೇಖರಣೆ ಆಗುವಂಥ ಪ್ರದೇಶಗಳಿದ್ದರೆ ಅವುಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ದಿನಕ್ಕೆ ಎರಡು ಬಾರಿ ಔಷಧ ಸಿಂಪಡಣೆ ಕಡ್ಡಾಯಗೊಳಿಸಲಾಗಿದೆ.

ಈಗಾಗಲೇ ಮೆಟ್ರೋ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಕೂಡ ನಮ್ಮ ಮೆಟ್ರೋ ಸಿಬ್ಬಂದಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಇದರ ಜತೆಗೆ, ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನೂ ಬಿಎಂಆರ್​ಸಿಎಲ್ ಕಡ್ಡಾಯಗೊಳೊಸಿದೆ.

RELATED ARTICLES

Related Articles

TRENDING ARTICLES