Friday, July 5, 2024

ಬಾಕ್ಸ್​​​​​​​ ಆಫೀಸ್​​​​ನಲ್ಲಿ ‘ಕಲ್ಕಿ 2898 ಎಡಿ’ ಅಬ್ಬರ ಗಳಿಸಿದ್ದೇಷ್ಟು..?

ಹೈದರಾಬಾದ್​: ನಿರ್ದೇಶಕ ನಾಗ್ ಅಶ್ವಿನ್ ಅವರು ಸೈನ್ಸ್ ಫಿಕ್ಷನ್ ಸಿನಿಮಾ ‘ಕಲ್ಕಿ 2898 ಎಡಿ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ವರ್ಷ ಯಾವ ಚಿತ್ರವೂ ಸಾವಿರ ಕೋಟಿ ಕ್ಲಬ್ ಸೇರಿರಲಿಲ್ಲ. ಈಗ ‘ಕಲ್ಕಿ 2898 ಎಡಿ’ ಚಿತ್ರ ಈ ಸಾಧನೆ ಮಾಡುವ ಸೂಚನೆ ಸಿಕ್ಕಿದೆ.

ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿರೋ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಐದು ದಿನಕ್ಕೆ 625 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಆರನೇ ದಿನದ ಗಳಿಕೆಯ ಲೆಕ್ಕಾಚಾರ ಸಿಕ್ಕಿದೆ.

ವರದಿ ಪ್ರಕಾರ ‘ಕಲ್ಕಿ 2898 ಎಡಿ’ ಚಿತ್ರ ಆರನೇ ದಿನಕ್ಕೆ 27.85 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ಭಾಷೆಯಿಂದ 11.2 ಕೋಟಿ ಕಲೆಕ್ಷನ್ ಆಗಿದೆ. ತಮಿಳು, ಮಲಯಾಳಂನಿಂದ ತಲಾ 1.2 ಕೋಟಿ ರೂಪಾಯಿ, ಹಿಂದಿಯಿಂದ 14 ಕೋಟಿ ರೂಪಾಯಿ ಸಿಕ್ಕಿದೆ. ಕನ್ನಡ ವರ್ಷನ್​ನಿಂದ ಸಿಕ್ಕಿರುವುದು ಕೇವಲ 25 ಲಕ್ಷ ರೂಪಾಯಿ ಮಾತ್ರ.

ಇದನ್ನೂ ಓದಿ: ದರ್ಶನ್​ ಜೈಲಿಂದ ಹೊರಗೆ ಬಂದ್ರೆ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ: ನಿರ್ಮಾಪಕ ಕೆ.ಮಂಜು

ಕನ್ನಡ ವರ್ಷನ್​ನಿಂದ ಇಷ್ಟೊಂದು ಕಡಿಮೆ ಗಳಿಕೆ ಆಗಲು ಪ್ರಮುಖ ಕಾರಣವೂ ಇದೆ. ಕರ್ನಾಟಕದಲ್ಲಿ ಈ ಚಿತ್ರದ ಹಂಚಿಕೆ ಪಡೆದಿರುವ ಕೆವಿಎನ್ ಪ್ರೊಡಕ್ಷನ್​ನವರು ಕನ್ನಡಕ್ಕೆ ಕೆಲವೇ ಕೆಲವು ಶೋಗಳನ್ನು ನೀಡಿದ್ದಾರೆ. ಇದರ ಜೊತೆಗೆ ಕನ್ನಡ ವರ್ಷನ್​ಗೆ ಯಾವುದೇ 3ಡಿ ಆಯ್ಕೆ ನೀಡಿಲ್ಲ. ಇದರಿಂದ ಸಹಜವಾಗಿಯೇ ಕನ್ನಡ ವರ್ಷನ್ ಗಳಿಕೆಯಲ್ಲಿ ಇಳಿಕೆ ಕಂಡಿದೆ.

‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ದತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಮೀರಿದೆ. ಹೀಗಾಗಿ ಸಿನಿಮಾಗೆ ದೊಡ್ಡ ಮೊತ್ತದ ಗಳಿಕೆ ಆಗಲೇಬೇಕಾದ ಅನಿವಾರ್ಯತೆ ಇತ್ತು. ಈ ಅನಿವಾರ್ಯತೆಯನ್ನು ಸಿನಿಮಾ ನೀಗಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ. ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ.

RELATED ARTICLES

Related Articles

TRENDING ARTICLES