Saturday, July 6, 2024

ರೋಹಿತ್ ವಿಚಿತ್ರ ನಡೆಗೆ ಕ್ಲಾರಿಟಿ..!

ದಕ್ಷಿಣ ಆಫ್ರಿಕಾ ಎದುರು ಜೂನ್ 29ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಯ ದಾಖಲಿಸಿದ ಬಳಿಕ ಪಿಚ್ನ ಹುಲ್ಲು ತಿಂದು ಸಂಭ್ರಮಿಸಿದ್ದೇಕೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೀಗ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿರಲಿಲ್ಲ: ಸಂಜಯ್ ಮಂಜ್ರೇಕರ್

ನೋಡಿ ಈ ಸಂಗತಿಗಳನ್ನು ನಾನು ಹೇಗೆ ಎಂದೆಲ್ಲಾ ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ಆ ರೀತಿ ನಡೆಯುತ್ತದೆ ಎಂದು ಮೊದಲೇ ಯಾರೂ ಬರೆದಿಟ್ಟಿರಲಿಲ್ಲ. ಆಗ ಮನಸ್ಸಿನಲ್ಲಿ ಅನ್ನಿಸಿದ ಹಾಗೆ ನಡೆದುಕೊಂಡಿದ್ದೇವೆ. ಪಿಚ್ ಬಳಿ ಹೋದಾಗ ಆ ಪಿಚ್ನಿಂದ ಈ ಗೆಲುವು ಸಾಧ್ಯವಾಯಿತು ಎಂಬ ಅನುಭವವಾಯಿತು. ಹೀಗಾಗಿ ಆ ಪಿಚ್, ಆ ಕ್ರೀಡಾಂಗಣವನ್ನು ನಾನು ನನ್ನ ಜೀವನದುದ್ದಕ್ಕೂ ಸ್ಮರಿಸುತ್ತೇನೆ. ಹೀಗಾಗಿ ಆ ಪಿಚ್ನ ಒಂದು ಭಾಗವನ್ನು ನನ್ನೊಳಗೆ ಸೇರಿಸಿಕೊಳ್ಳಲು ಬಯಸಿದೆ ಎಂದು ತಮ್ಮೊಳಗಿನ ಭಾವನೆಯನ್ನು ರೋಹಿತ್ ಹಂಚಿಕೊಂಡಿದ್ದಾರೆ.

ವಿಶ್ವಕಪ್​ ಗೆದ್ದ ಕೆಲವೇ ನಿಮಿಷಗಳಲ್ಲಿ ಕ್ರಿಕೆಟ್​ಗೆ ಗುಡ್​ ಬೈ:

ಐಸಿಸಿ ಟಿ20 ವಿಶ್ವಕಪ್ ಗೆದ್ದ ಸಂತಸದಲ್ಲಿದ್ದ ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಕೆಲವೇ ಕ್ಷಣಗಳಲ್ಲಿ ರೋಹಿತ್ ಶರ್ಮಾ ಕೂಡಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಆದರೆ ತಾನು ರಾಜೀನಾಮೆ ನೀಡುವ ನಿರ್ಧಾರ ಮೊದಲೇ ಮಾಡಿರಲಿಲ್ಲ ಎಂದು ರೋಹಿತ್ ಶರ್ಮಾ ಬಳಿಕ ಬಹಿರಂಗ ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES