Friday, July 5, 2024

ಸತ್ಸಂಗದಲ್ಲಿ 2.50 ಲಕ್ಷ ಭಕ್ತರು..! ಬಾಬಾ ಪಾದದ ಧೂಳಿಗೆ ಮುಗಿಬಿದ್ದು ಕಾಲ್ತುಳಿತಕ್ಕೆ ಸತ್ತವರು 121 ಮಂದಿ.!!

ಈ ದುರಂತಕ್ಕೆ ಕಾರಣವಾಗಿದ್ದು ಬಾಬಾ ಪಾದದ ಧೂಳು. ಆತನ ಪಾದದ ಧೂಳು ಎಂದರೆ ಒಂದು ಚಿಟಿಕೆ ಮಣ್ಣು.. ಆ ಮಣ್ಣು ಸಂಗ್ರಹಕ್ಕೆ ಮುಗಿಬಿದ್ದ ಸಹಸ್ರಾರು ಜನರ ಪೈಕಿ ಕಾಲ್ತುಳಿತಕ್ಕೆ 121 ಮಂದಿ ಮಣ್ಣುಪಾಲಾಗಿದ್ದಾರೆ.

ಹೌದು.. ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಆಸ್ಪತ್ರೆ ಮತ್ತು ಸತ್ಸಂಗ ನಡೆದ ಪ್ರದೇಶದಲ್ಲಿ ಎಲ್ಲೆಂದರಲ್ಲಿದ್ದ ಬಿದ್ದ ಶವಗಳನ್ನ ಕಂಡು ಜನರೆಲ್ಲಾ ದಂಗಾಗಿದ್ದಾರೆ. ಆಯೋಜಕರು ಮುಂಜಾಗ್ರತೆ ವಹಿಸದೇ ಇರುವುದೇ ಇಂಥದ್ದೊಂದು ಘನಘೋರ ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಹತ್ರಾಸ್ ಜಿಲ್ಲೆಯ ರತಿಭಾನಪುರ ಎಂಬ ಗ್ರಾಮದ ಬಳಿಯಲ್ಲಿ ಈ ಸಾವಿನ ಸತ್ಸಂಗ ಆಯೋಜನೆ ಮಾಡಲಾಗಿತ್ತು. ಇಲ್ಲಿ 80 ಸಾವಿರ ಜನರು ಜಮಾಯಿಸಬಹುದು ಎಂದು ಅನುಮತಿ ಪಡೆಯಲಾಗಿತ್ತು. ಆದರೆ ಬಾಬಾ ಭೋಲೇನಾಥ್ ಸತ್ಸಂಗಕ್ಕೆ ಸುಮಾರು 2.50 ಲಕ್ಷ ಜನರು ಆಗಮಿಸಿದ್ದರು ಎನ್ನಲಾಗ್ತಿದೆ. ಸೂರಜ್ ಪಾಲ್ @ ಸಾಕಾರ್ ಹರಿ ಎಂಬ ಈ ಬಾಬಾ ಸತ್ಸಂಗದ ಪ್ರವಚನ ಮುಗಿದ ಬಳಿಕ ಆತನ ಪಾದದ ಧೂಳು ಸಂಗ್ರಹಿಸಲು ಜನರು ಮುಂದಾಗಿದ್ದರಂತೆ. ಆತ ನಡೆದು ಸಾಗಿದ ದಾರಿ ಅಥವಾ, ಆತನ ಕಾರಿನ ಟಯರ್ನ ಧೂಳು ಎಂದರೆ ಒಂದು ಚಿಟಿಕೆ ಮಣ್ಣು ಸಂಗ್ರಹಿಸಲು ಮುಂದಾಗಿದ್ದರಂತೆ.

ಇದನ್ನೂ ಓದಿ: ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ

ಸೂರಜ್ ಪಾಲ್ @ ಸಾಕಾರ್ ಹರಿ ಗುರೂಜಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾನೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ ವ್ಯಾಪ್ತಿಯಲ್ಲಿ ಈತನನ್ನ ಭಕ್ತರು ಬೋಲೇ ಬಾಬಾ ಎಂದು ಸಹ ಕರೆಯುತ್ತಾರೆ. ಈ ಬಾಬಾ ಸತ್ಸಂಗ ಮುಗಿಸಿ ಸಾಗಿದ ಆ ದಾರಿ ತುಂಬಾ ಚಿಕ್ಕದಾಗಿತ್ತು. ಆಗ ಸಹಸ್ರ ಸಹಸ್ರ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮಕ್ಕಳ ಸಮೇತ ಈತನ ಪಾದದ ಧೂಳು ಸಂಗ್ರಹಕ್ಕೆ ಮುಗಿಬಿದ್ದಿದ್ದರು. ಈ ಹಂತದಲ್ಲಿ ಕೇವಲ 40 ಪೊಲೀಸ್ ಸಿಬ್ಬಂದಿ ಮಾತ್ರ ಅಲ್ಲಿ ಸುವ್ಯವಸ್ಥೆಗೆ ನಿಯೋಜನೆ ಮಾಡಲಾಗಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಗುಂಪಿನಲ್ಲಿದ್ದ ಜನರು ಮುಗಿಬಿದ್ದು ಸಾಗಿದ್ದು, ನಂತರ ಏಕಾಏಕಿ ಗಾಬರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ದುರಂತಕ್ಕೆ ಕಾರಣವಾಯ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ 28 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ ಕೆಲ ಪೊಲೀಸ್ ಸಿಬ್ಬಂದಿಯೂ ಇದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದುರಂತ ನಡೆದ ಬಳಿಕ ಬೋಲೆ ಬಾಬಾ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ.

RELATED ARTICLES

Related Articles

TRENDING ARTICLES