Friday, July 5, 2024

ಅಮೆರಿಕದಿಂದ ಚೀನಾದ 116 ಮಂದಿ ಅಕ್ರಮ ವಲಸಿಗರು ಗಡಿಪಾರು

ಅಮೇರಿಕ: 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ದೊಡ್ಡ ಚಾರ್ಟರ್ ವಿಮಾನದಲ್ಲಿ ಚೀನಿಯರನ್ನು ತವರಿಗೆ ಕಳುಹಿಸಲಾಗಿದೆ.

ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ವಲಸಿಗರ ವಿಷಯ ಅತ್ಯಂತ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಿದೆ. ಕಾನೂನುಬಾಹಿರವಾಗಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರನ್ನು ಗಡೀಪಾರು ಮಾಡಲು ನಿರಂತರವಾಗಿ ನಮ್ಮ ವಲಸೆ ಕಾನೂನನ್ನು ಜಾರಿಗೊಳಿಸುತ್ತಿರುತ್ತೇವೆ ಎಂದು ಹೋಮ್‌ಲ್ಯಾಂಡ್ ಕಾರ್ಯದರ್ಶಿ ಅಲೆಜಾಂಡ್ರೆ ಮಯೋರ್ಕಾಸ್ ಹೇಳಿದ್ದಾರೆ.

ಇದನ್ನೂ ಓದಿ: ಸತ್ಸಂಗದಲ್ಲಿ 2.50 ಲಕ್ಷ ಭಕ್ತರು..! ಬಾಬಾ ಪಾದದ ಧೂಳಿಗೆ ಮುಗಿಬಿದ್ದು ಕಾಲ್ತುಳಿತಕ್ಕೆ ಸತ್ತವರು 121 ಮಂದಿ.!!

ಅನಿಯಮಿತ ವಲಸೆಯನ್ನು ನಿಯಂತ್ರಿಸಲು ಮತ್ತು ತಡೆಯಲು ಹಾಗೂ ವಿಸ್ತ್ರತ ಕಾನೂನು ಜಾರಿ ಪ್ರಯತ್ನಗಳ ಮೂಲಕ ಅಕ್ರಮ ಮಾನವ ಕಳ್ಳಸಾಗಣೆಗೆ ಕಡಿವಾಣ ಹಾಕಲು ಚೀನಾ ಜೊತೆ ಅಮೆರಿಕ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆ ಹೇಳಿದೆ. ಈಗ ಗಡೀಪಾರು ಮಾಡಲಾಗಿರುವ ಚೀನಾ ವಲಸಿಗರು ಅಮೆರಿಕದಲ್ಲಿ ಎಷ್ಟು ಸಮಯದಿಂದ ಇದ್ದರು ಎಂಬ ಪ್ರಶ್ನೆಗಳಿಗೆ ಅಮೆರಿಕ ಪ್ರತಿಕ್ರಿಯೆ ನೀಡಿಲ್ಲ.

ಚೀನಾದ ಅಕ್ರಮ ವಲಸಿಗರನ್ನು ಅವರ ದೆಶಕ್ಕೆ ಕಳುಹಿಸುವುದೇ ಅಮೆರಿಕಕ್ಕೆ ದೊಡ್ಡ ಸವಾಲಾಗಿತ್ತು. ಏಕೆಂದರೆ, ಅವರನ್ನು ದೇಶಕ್ಕೆ ಸೇರಿಸಿಕೊಳ್ಳಲು ಚೀನಾ ಆಡಳಿತ ಸಿದ್ಧವಿರಲಿಲ್ಲ. ಕಳೆದ ವರ್ಷ ಮೆಕ್ಸಿಕೊ ಮೂಲಕ ಭಾರಿ ಪ್ರಮಾಣದ ಚೀನಾ ವಲಸಿಗರು ಅಮೆರಿಕಕ್ಕೆ ಬಂದಿರುವುದು ಗಮನಕ್ಕೆ ಬಂದಿತ್ತು.
2023ರಲ್ಲಿ ಅಮೆರಿಕದ ವಲಸೆ ಅಧಿಕಾರಿಗಳು ಮೆಕ್ಸಿಕೊ ಗಡಿಯಲ್ಲಿ 37,000 ಚೀನಾ ಪ್ರಜೆಗಳನ್ನು ಬಂಧಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 10 ಪಟ್ಟು ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES