Sunday, September 8, 2024

ಬೀದಿಯಲ್ಲಿ ಫೋನ್​​​​ಗಾಗಿ ಪ್ರೇಮಿಗಳ ರಂಪಾಟ; ವೀಡಿಯೋ ವೈರಲ್​​​​​​​​​​

ಹುಬ್ಬಳ್ಳಿ: ಬೀದಿಯಲ್ಲಿ ಫೋನ್​​​​ಗಾಗಿ ಪ್ರೇಮಿಗಳ ರಂಪಾಟ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಕೊಪ್ಪಿಕರ ರಸ್ತೆಯಲ್ಲಿ ನಡೆದಿದೆ.

ಫೋನ್​​​​ಗಾಗಿ ಪ್ರೇಮಿಗಳ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆ ಪಕ್ಕದಲ್ಲೇ ಪೋನ್​​ಗಾಗಿ ಇಬ್ಬರು ಪ್ರೇಮಿಗಳು ಕಿತ್ತಾಡಿದ್ದಾರೆ. ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ರೇಮಂಡ್ ಶೋರೂಂ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ: ಮಗನನ್ನೇ ಕೈದಿ ಮಾಡಿದ ದರ್ಶನ್​ ಹುಚ್ಚು ಫ್ಯಾನ್!

ಜಿಟಿ ಜಿಟಿಯ ಮಳೆಯಲ್ಲಿ ರಸ್ತೆ ಪಕ್ಕದಲ್ಲಿ ಪೋನ್‌ಗಾಗಿ ಪ್ರೀಯತಮ ಹುಡುಗಿಯ ಸ್ಕಾರ್ಪ್ ಕೊರಳಿಗೆ ಹಾಕಿ ಪೋನ್ ಕೊಡು ಎಂದು ಪೇಚಾಟ ಮಾಡಿದ್ದಾನೆ. ಇನ್ನು, ಈ ಯುವಕನಿಗೆ ಯುವತಿ ಮೇಲೆ ಅನುಮಾನಕ್ಕೊ ಏನೋ ಗೊತ್ತಿಲ್ಲ. ಯುವತಿಯನ್ನ ಬಿಡದೇ ಈ ರೀತಿ ಕಾಡಿಸಿದ್ದಾನೆ. ಇನ್ನು ಇದನ್ನು ನೋಡಿದ ಸ್ಥಳೀಯರು ಹುಡುಗನಿಗೆ ಥಳಿಸಿದ್ದಾರೆ. ಸದ್ಯ ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES