Monday, December 23, 2024

ಪತ್ನಿ ಅನುಷ್ಕಾಗೆ ವಿರಾಟ್​​​​ ಕೊಹ್ಲಿ ಪ್ರೀತಿಯ ಸಂದೇಶ

ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾಗೆ ಮೆಚ್ಚುಗೆ ಮತ್ತು ಪ್ರೀತಿಯನ್ನು ಸಂದೇಶವನ್ನ ಕಳುಹಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಅನುಷ್ಕಾ ಜತೆ ಇರುವ ಫೋಟೊ ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾರೆ. ನೀನಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ನನ್ನನ್ನು ವಿನಮ್ರವಾಗಿ ಇರಲು ಪ್ರಯತ್ನಿಸಿರುವೆ. ನಾನು ನಿಮಗಾಗಿ ಹೆಚ್ಚು ಕೃತಜ್ಞರಾಗಿರಲು ಸಾಧ್ಯವಿಲ್ಲ. ಈ ಗೆಲುವು ನನ್ನದಷ್ಟೇ ನಿನ್ನದು ಕೂಡ. ಧನ್ಯವಾದಗಳು ಮತ್ತು ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Virat Kohli (@virat.kohli)

 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ ಹಲವಾರು ಸೆಲೆಬ್ರಿಟಿಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ-ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊಗಳಿ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾಗೆ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ ಅನುಷ್ಕಾ ಶರ್ಮಾ ಅವರು ಪೋಸ್ಟ್‌ ಹಾಕಿ ತಮ್ಮ ಪ್ರೀತಿಯ ಪತಿ ವಿರಾಟ್​​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಈ ಬೆನ್ನಲ್ಲೇ ಪತ್ನಿ, ನಟಿ ಅನುಷ್ಕಾ ಶರ್ಮಾಗೆ ವಿರಾಟ್​​​​ ಕೊಹ್ಲಿ ತಮ್ಮ ಹಾಗೂ ಅನುಷ್ಕಾ ಫೋಟೋ ಹಾಕಿ ಪ್ರೀತಿಯನ್ನು ಸಂದೇಶವನ್ನ ಕಳುಹಿಸಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

RELATED ARTICLES

Related Articles

TRENDING ARTICLES