Sunday, December 22, 2024

ಕೆಟ್ಟ ಕಾಮೆಂಟ್ಸ್​​​​​ ಅನ್ನ ನಾನು ಸ್ವೀಕರಿಸುವುದೇ ಇಲ್ಲ: ನಟಿ ಶ್ರುತಿ ಹರಿಹರನ್

ಸೆಲೆಬ್ರಿಟಿಗಳು ಅಂದ ಮೇಲೆ ಅಭಿಮಾನಿ ಬಳಗ, ಸಕಾರಾತ್ಮಕ ಚಿಂತನೆ, ಉತ್ತಮ ಜೀವನದೊಂದಿಗೆ ನಕಾರಾತ್ಮಕ ಕಾಮೆಂಟುಗಳು ಹಾಗೂ ಮಾನಸಿಕ ಒತ್ತಡವು ಸಹಜ. ಅದರಲ್ಲೂ ಕಿರುತೆರೆ ನಟರು ಜನರಿಗೆ ಬೇಗ ಹತ್ತಿರವಾಗುವುದರ ಜೊತೆಗೆ ಸುಲಭದಲ್ಲಿ ಸಿಗುವುದರಿಂದ ಅವರ ವೈಯಕ್ತಿಕ ಜೀವನದಲ್ಲಿ ಏನೇನು ಆಗುತ್ತದೆ ಎಂಬುದು ಪ್ರೇಕ್ಷಕರಿಗೆ ಸದಾ ಕುತೂಹಲವನ್ನು ಮೂಡಿಸಿರುತ್ತದೆ.

ಕೆಲವೊಮ್ಮೆ ಅನಾವಶ್ಯಕವಾಗಿ ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಕೇಳಬೇಕಾಗುತ್ತದೆ. ಅಭಿನಯದ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ, ಉಡುಗೆ ತೊಡುಗೆ ಬಗ್ಗೆ ಹೀಗೆ ಪ್ರತಿಯೊಂದು ಮೇಲೆಯೂ ಕೆಟ್ಟ ಮಾತುಗಳನ್ನು ಇಂತಹ ಸೆಲೆಬ್ರಿಟಿಗಳು ಕೇಳಬೇಕಾಗುತ್ತದೆ. ಈ ರೀತಿಯ ನಕಾರಾತ್ಮಕ ಕಾಮೆಂಟುಗಳಿಗೆ ಹಾಗೂ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ನಮ್ಮ ಸೆಲೆಬ್ರಿಟಿಗಳು ಎಂದು ನೋಡೋಣ ಬನ್ನಿ.

ಸೋಶಿಯಲ್ ಮೀಡಿಯಾದಲ್ಲಿ ಬರೋ ನೆಗೆಟಿವ್ ಕಾಮೆಂಟ್ಸ್ ಕುರಿತು ಶ್ರುತಿ ಹರಿಹರನ್ ಪವರ್​​​​​​​ನೊಂದಿಗೆ ಮಾತನಾಡಿದ್ದಾರೆ. ಕೆಟ್ಟ ಕಾಮೆಂಟ್ ಗಳನ್ನ ನಾನು ಸ್ವೀಕರಿಸುವುದೇ ಇಲ್ಲ. ಬ್ಲಾಕ್ ಮಾಡ್ತೀನಿ, ರಿಪೋರ್ಟ್ ಮಾಡ್ತೀನಿ.

ಕೆಲವೊಮ್ಮೆ ಅವುಗಳನ್ನ ಹೈಡ್ ಕೂಡ ಮಾಡಿದ್ದೀನಿ. 2 ಹೈಡ್ ಮಾಡಿದ್ರೆ 10 ಮೆಸೇಜ್ ಬರುತ್ತೆ. ಸೈಬರ್ ಕ್ರೈಂಗಳನ್ನ ತಡೆಗಟ್ಟಲು ಪೊಲೀಸರು ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು.. ಸೋಶಿಯಲ್ ಮೀಡಿಯಾ ಹಾವಳಿ ಈಗಿನದ್ದು ಅಲ್ಲ. ಮೊದಲಿನಿಂದಲೂ ಇದೆ. ಆದರೆ, ಅದನ್ನ ಒಳ್ಳೆಯತನಕ್ಕೆ ಮಾತ್ರ ಬಳಸಬೇಕು ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES