Thursday, December 19, 2024

ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್‌ ಪತ್ರ

ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್‌ ಪತ್ರ ಬರೆದಿದ್ದಾರೆ. ನಾಳೆ ಗೋಲ್ಡನ್ ಸ್ಟಾರ್ ಗಣೇಶ್​​​ ತಮ್ಮ 46ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಇಂದು ಗಣೇಶ್​​​ ಬಹಿರಂಗ ಪತ್ರ ಬರೆದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು 4 ವರ್ಷಗಳಿಂದ ನಟ ಗಣೇಶ್ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ಬಾರಿ ನಟ ಗಣೇಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಅವರ ಮನೆಯ ಬಳಿ ನೆರೆದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಕೋವಿಡ್ ಹಾಗೂ ಇನ್ನಿತರೆ ಕಾರಣಗಳಿಂದ ಅಭಿಮಾನಿಗಳೊಟ್ಟಿಗೆ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈಗ ಮತ್ತೊಮ್ಮೆ ಗಣೇಶ್ ಹುಟ್ಟುಹಬ್ಬ ಹೊಸಿಲಿನಲ್ಲಿದ್ದು, ಈ ಬಾರಿಯೂ ಊರಲ್ಲಿ ಇಲ್ಲ, ಮುಂದಿನ ವರ್ಷ ಸಂಭ್ರಮಿಸೋಣ. ಇದೇ ಕಾರಣವಾಗಿ ನಟ ಗಣೇಶ್ ಅಭಿಮಾನಿಗಳಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಊಟಿಗೆ ತೆರಳಿದ್ದಾರೆ.

 

View this post on Instagram

 

A post shared by Ganesh (@goldenstar_ganesh)

RELATED ARTICLES

Related Articles

TRENDING ARTICLES