Sunday, December 22, 2024

ಶಿವಣ್ಣ ಹುಟ್ಟು ಹಬ್ಬಕ್ಕೆ ಫ್ಯಾನ್ಸ್‌ಗೆ ಸಿಗಲಿದೆ ಸಿಹಿಸುದ್ದಿ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಇದೀಗ ಗುಡ್​​​​ ನ್ಯೂಸ್​​​​​ ಸಿಕ್ಕಿದೆ. ಜುಲೈ 12ರಂದು ಶಿವಣ್ಣ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ನೀಡಲು ‘ಭೈರತಿ ರಣಗಲ್’ ಚಿತ್ರತಂಡ ಸಜ್ಜಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ಶಿವಣ್ಣ ಸದ್ಯ ‘ಭೈರತಿ ರಣಗಲ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಭೈರತಿ ರಣಗಲ್’ ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಎದುರು ನೋಡಿದ್ದಾರೆ. ಹೀಗಿರುವಾಗ ಇಂದು ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮತ್ತೊಂದೆಡೆ ಶಿವಣ್ಣ 62ನೇ ವರ್ಷದ ಜನ್ಮದಿನ ಆಚರಣೆ ಭರ್ಜರಿ ಪ್ಲ್ಯಾನ್ ಕೂಡ ನಡೆಯುತ್ತಿದೆ. ಹಾಗಾಗಿ ಜುಲೈ 12ರಂದು ಶಿವಣ್ಣ ಪಾತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ವಿಶೇಷವಾಗಿ ಶುಭಕೋರಲಿದೆಯಂತೆ. ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವಣ್ಣ ಖದರ್ ನೋಡಲು ಅವಕಾಶ ಸಿಗಲಿದೆ. ಈ ಮೂಲಕ ಫ್ಯಾನ್ಸ್‌ಗೆ ಸರ್ಪ್ರೈಸ್ ಸಿಗಲಿದೆ.

ಅಂದಹಾಗೆ, ಗೀತಾ ಪಿಕ್ಚರ್ಸ್ ಬ್ಯಾನರ್‌ನ ‘ಭೈರತಿ ರಣಗಲ್’ ಸಿನಿಮಾ ನಿರ್ಮಾಣವಾಗುತ್ತಿದೆ. ಗೀತಾ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿ ಶುಭಕೋರಿದೆ. ಮಫ್ತಿಗಿಂತ ಬಹಳ ಅದ್ಧೂರಿಯಾಗಿ ಪ್ರೀಕ್ವೆಲ್ ಬರಲಿದೆ. ಮಾಫಿಯಾ ಡಾನ್ ಭೈರತಿ ರಣಗಲ್’ ಹಿನ್ನೆಲೆ ಏನು ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ವಕೀಲನಾಗಿದ್ದ ಭೈರತಿ ರಣಗಲ್ ದೊಡ್ಡ ಡಾನ್ ಆಗಿ ಬದಲಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ. ನೂರಾರು ಜನ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಹಗಳಿರುಲು ಕೆಲಸ ಮಾಡುತ್ತಿದ್ದಾರೆ. ಇಲ್ಲೂ ಗಣಿ ಪ್ರದೇಶ, ಹೆಲಿಕ್ಯಾಪ್ಟರ್ ಶಾಟ್ಸ್ ಇದೆ. ಇನ್ನೂ ಪೊಲೀಸ್ ಠಾಣೆಯನ್ನೇ ರಣಗಲ್ ಸುಟ್ಟು ಬಿಡುವ ಸನ್ನಿವೇಶ ಕೂಡ ಚಿತ್ರದಲ್ಲಿರುವಂತೆ ಕಾಣುತ್ತಿದೆ. ಒಟ್ನಲ್ಲಿ ಈ ವಿಡಿಯೋ ನೋಡಿ ಫ್ಯಾನ್ಸ್ ಚಿಂದಿ ಆಗಿದೆ ಎಂದು ಹಾಡಿಹೊಗಳಿದ್ದಾರೆ.

ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಬೋಸ್, ದೇವರಾಜ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ವಸಿಷ್ಠ ಸಿಂಹ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಅಂದಹಾಗೆ, ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ.

RELATED ARTICLES

Related Articles

TRENDING ARTICLES