Sunday, September 8, 2024

ಮಳೆಗೆ ಸ್ಕೂಟರ್ ಸೀಟಿನೊಳಗೆ ಬೆಚ್ಚಗೆ ಕುಳಿತಿದ್ದ ಹೆಬ್ಬಾವು, ಬೈಕ್ ಸವಾರ ಶಾಕ್

ಹಾವುಗಳೆಂದರೆ ಎಲ್ಲರಿಗೂ ಭಯಾನೇ, ಇದನ್ನು ನೋಡುವುದು ಬಿಡಿ, ಹಾವು ಎಂದರೆ ಸಾಕು ನಡುಕ ಶುರುವಾಗುತ್ತದೆ. ಇನ್ನು ನಮ್ಮ ಕಣ್ಣಿಗೆ ಬಿದ್ದರಂತೂ ಒಂದು ಕ್ಷಣವು ಅಲ್ಲಿ ನಿಲ್ಲುವುದೇ ಇಲ್ಲ ಬಿಡಿ.

ಈ ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಋತುವಿನಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯ ಮೂಲೆ, ಶೂ ಹಾಗೂ ಬೈಕ್ ಸೇರಿದಂತೆ ಇನ್ನಿತ್ತರ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ.

ಇದನ್ನೂ ಓದಿ: ಮುಂದಿನ 2 ಗಂಟೆಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಇಲ್ಲದಿದ್ದರೆ ಈ ಹಾವುಗಳಿಂದ ಪ್ರಾಣಕ್ಕೆ ಕುತ್ತು ಬರುವುದು ಖಂಡಿತ. ಇದೀಗ ಸ್ಕೂಟರಿನ ಪೆಟ್ರೋಲ್ ಟ್ಯಾಂಕ್‌ಗೆ ಸಣ್ಣ ಹೆಬ್ಬಾವೊಂದು ಸುತ್ತಿಕೊಂಡಿರುವ ವಿಡಿಯೋ ಮೈ ಜುಮ್ ಎನ್ನುವಂತಿದೆ.

ಸಾಲಿತ್ ಮುಲ್ಲಂಬತ್ ಎಂಬ ವ್ಯಕ್ತಿಯೂ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ವ್ಯಕ್ತಿಯೊಬ್ಬರು, ಒಂದು ಕೋಲಿನಿಂದ ಸ್ಕೂಟರ್‌ ಸೀಟನ್ನು ತೆರೆದಿದ್ದಾರೆ. ಈ ವೇಳೆ ಸಣ್ಣ ಗಾತ್ರದ ಹೆಬ್ಬಾವೊಂದು ಪೆಟ್ರೋಲ್ ಟ್ಯಾಂಕ್ ಸುತ್ತ ಸುರುಳಿ ಸುತ್ತಿಕೊಂಡು ಮಲಗಿರುವುದು ಕಾಣಬಹುದು. ಈ ಹಾವು ಅಲ್ಲಿಗೆ ಹೇಗೆ ಹೋಯಿತು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ವ್ಯಕ್ತಿಯೂ ಮಲಯಾಳಂ ಮಾತನಾಡುತ್ತಿರುವ ಕಾರಣ ಈ ಘಟನೆ ನಡೆದಿರುವುದು ಕೇರಳದ್ದು ಎನ್ನಲಾಗಿದೆ.

RELATED ARTICLES

Related Articles

TRENDING ARTICLES