Sunday, September 8, 2024

ರಾಂಗ್​ ಸೈಡ್​ನಲ್ಲಿ ಬಸ್​ ಓಡಿಸಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ: ನೆಟ್ಟಿಗರಿಂದ ಟೀಕೆ

ಬೆಂಗಳೂರು: ಖಾಸಗಿ ವಾಹನಗಳು, ಬೈಕ್‌ಗಳು ಹೆಚ್ಚಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ನೋಡುತ್ತೇವೆ. ಆದರೆ, ನಿಯಮಗಳನ್ನು ರೂಪಿಸುವ ಸರ್ಕಾರಿ ಸಂಸ್ಥೆಯ ವಾಹನಗಳೇ ಈ ನಿಯಮಗಳನ್ನು ಮುರಿದರೆ ಏನು ಮಾಡುವುದು? ಇಂತಹದ್ದೆ ಘಟನೆ ಸದ್ಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ಅಜಾಗರೂಕತೆಯ ವಾಹನ ಚಾಲನೆ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕೆ ಮಾಡಿದ್ದಾರೆ.

ರಾಜ್ಯ ಪೊಲೀಸರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎರಡು ಸಂಸ್ಥೆಗಳು ಹಲವು ಬಾರಿ ಸಂಚಾರ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಕೂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮುಂದುವರಿದಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ರಾಂಗ್ ಸೈಡ್‌ನಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದೆ. ಸರ್ಕಾರಿ ಬಸ್‌ನ ಈ ಆಟ ಬಸ್ ಪ್ರಯಾಣಿಕರಿಗೆ ಮತ್ತು ಇತರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡಿದೆ.

ಇದನ್ನೂ ಓದಿ: ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

ಕಳೆದ ಶನಿವಾರದಂದು ತೆಗೆದು ವಿಡಿಯೋವಿಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಬಸ್ ಜನನಿಬಿಡ ರಸ್ತೆಯ ಮೂಲಕ ರಾಂಗ್ ಸೈಡ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಶ್ರೇಯಸ್ ಬೇಲೂರ್ ಎಂಬ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಬಿಡುವಿಲ್ಲದ ದಿನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು. ಅವರು ವೇಗದ ಲೇನ್‌ನಲ್ಲಿದ್ದಾರೆ .ಈ ಅಜಾಗರೂಕ ಬಸ್ ಡ್ರೈವರ್‌ನಿಂದಾಗಿ ಒಂದೆರಡು ಕಾರುಗಳು ತ್ವರಿತವಾಗಿ ಲೇನ್‌ಗಳನ್ನು ಬದಲಾಯಿಸಬೇಕಾಯಿತು” ಎಂದು ಟೀಕಿಸಿದ್ದಾರೆ.

ಇದೇ ವೇಳೆ ಕೆಎಸ್‌ಆರ್‌ಟಿಸಿ ವೀಡಿಯೋಗೆ ಪ್ರತಿಕ್ರಿಯಿಸಿದ್ದು, ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ತಮ್ಮ ಸಲಹೆಗಾಗಿ ಧನ್ಯವಾದಗಳು, ತಾವು ಕಳುಹಿಸಿರುವ ವೀಡೀಯೋದಲ್ಲಿ ವಾಹನ ಸಂಖ್ಯೆ ಸರಿಯಾಗಿ ಕಾಣುತ್ತಿಲ್ಲ ವಾಹನ ಸಂಖ್ಯೆ ಹಾಗೂ ಘಟನೆ ನಡೆದ ದಿನಾಂಕವನ್ನು ಒದಗಿಸಿದಲ್ಲಿ ಸಂಬಂದಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

RELATED ARTICLES

Related Articles

TRENDING ARTICLES