Monday, July 1, 2024

ರಸ್ತೆಯಲ್ಲಿ ಹುಡುಗಿ ಟಕಾ ಟಕ್​ ಟಕಾ ಟಕ್​ ಸಿಗರೇಟ್​.. ಮನೆಯಲ್ಲಿ ತಂದೆ ಕಟಾ ಕಟ್​ ಕಟಾ ಕಟ್​

ಇದು ರಿಯಲ್​ಗಿಂತ ಹೆಚ್ಚಾಗಿ ರೀಲ್ಸ್​​ಗಳದ್ದೇ ಜಮಾನಾ. ಜೀವನದ ಸ್ಟೇಟಸ್ ಹೇಗಿರುತ್ತೋ ಗೊತ್ತಿಲ್ಲ. ಆದ್ರೆ ಮೊಬೈಲ್​​ನಲ್ಲಿ ಸ್ಟೇಟಸ್ ಡೇಲಿ ಅಪ್​ಡೇಟ್​ ಆಗ್ತಾನೇ ಇರಬೇಕು ಅನ್ನೋದೇ ಹುಡುಗ-ಹುಡುಗಿಯರ ಖಯಾಲಿ.

ಹಾಗೇನೇ ರೀಲ್ಸ್ ಮಾಡ್ತಿದ್ದ ಚಂದದ ಹುಡುಗಿಯೊಬ್ಬಳು ಅದ್ಯಾರ ಮಾತು ಕೇಳಿದ್ಲೋ ಏನೋ? ರಸ್ತೆಯಲ್ಲಿ ಬಿಂದಾಸ್ ಆಗಿ ನಡೆಯುತ್ತಾ ಟಕಾ ಟಕ್ ಟಕಾ ಟಕ್ ಅಂತಾ ಸಿಗರೇಟ್ ಸೇದಿ ಹೊಗೆಬಿಟ್ಟಿದ್ಲು.
ಇದನ್ನ ವಿಡಿಯೋ ಮಾಡಿದ್ದ ಯುವಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದ. ಕೇಳ್ತೀರಾ.. ಕೆಲವೇ ಗಂಟೆಗಳ ಲೆಕ್ಕದಲ್ಲಿ ವಿಡಿಯೋ ಶೇರ್ ಆಗಿತ್ತು. ದಿನ ಬೆಳಗಾಗೋಷ್ಟರಲ್ಲಿ ವೈರಲ್ ಆಗಿತ್ತು. ಆ ಊರಿನ ಎಲ್ಲರ ಮೊಬೈಲ್​​ನಲ್ಲೂ ಇದೇ ಹುಡುಗಿಯ ಹವಾ. ಅಷ್ಟಾಗಿದ್ರೆ ಆ ಹುಡುಗಿಗೂ, ವಿಡಿಯೋ ಮಾಡಿದ ಆಕೆಯ ಸರ್ಕಲ್​​ನವರೂ ಖುಷ್ ಖುಷಿಯಾಗಿ ಇರ್ತಿದ್ರು. ಆದ್ರೆ ಅಷ್ಟೊಂದು ವೈರಲ್ ಆದ ವಿಡಿಯೋ ಮನೆಯವರಿಗೆ ಗೊತ್ತಾಗದೇ ಇರ್ತದಾ?

ಇದನ್ನೂ ಓದಿ: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

ಆ ಹುಡುಗಿ ಅಪ್ಪಂಗೂ ಗೊತ್ತಾಗೋಯ್ತು! ತನ್ನ ಮಗಳು ಸಿಗರೇಟ್ ಸೇದುತ್ತಾಳೆ.. ಅದು ಪಬ್ಲಿಕ್​​ನಲ್ಲಿ, ರಸ್ತೆಯಲ್ಲಿ ಸಾಗುತ್ತಾ ಸಿಗರೇಟ್ ಸೇದಿ ಹೊಗೆ ಬಿಡುತ್ತಾ ಸಾಗುತ್ತಾಳೆ. ಕೇಳಿದೋರ ಮುಂದೆ ನೌಟಿಂಕಿ ತರಾ ಮೈಕೈ ಬಳುಕಿಸ್ತಾಳೆ ಅಂದ್ರೆ ಯಾವ ತಂದೆಗೆ ತಾನೇ ಕೋಪ ಬರಲ್ಲ ಹೇಳಿ. ಅಲ್ಲೂ ಹಾಗೇ ಆಗಿತ್ತು. ಈ ವಿಡಿಯೋ ನೋಡಿದ ಅಪ್ಪ ಬೆಪ್ಪನಾಗಿ ಹೋಗಿದ್ದ. ತನ್ನ ಚೋಟುದ್ದದ ಮಗಳು ಇಷ್ಟೆಲ್ಲಾ ಮಾಡ್ತಾಳಾ ಅಂತಾ ಮನೆಯಲ್ಲಿ ಬೆಲ್ಟ್​​​ನಿಂದ ರಪಾ ರಪ್​ ರಪಾ ರಪ್​ ಅಂತಾ ಹಿಂದೂ ಮುಂದು ನೋಡದೇ ಬಾರಿಸಿದ್ದಾನೆ.

ಈ ವಿಡಿಯೋ ಕೂಡ ಅದ್ಯಾರೋ ಪುಣ್ಯಾತ್ಮ ರೆಕಾರ್ಡ್ ಮಾಡಿದ್ದಾನೆ. ಅಪ್ರಾಪ್ತ ಮಗಳಿಗೆ ಬುದ್ಧಿ ಕಲಿಸಲು ಅಪ್ಪ ಹಿಗ್ಗಾಮುಗ್ಗಾ ಬೆಲ್ಟ್​​ನಿಂದ ಹೊಡೆದಿರೋ ವಿಡಿಯೋ ಕೂಡ ಈಗ ವೈರಲ್ ಆಗ್ತಿದೆ. ಮಗಳು ಸಿಗರೇಟ್ ಸೇದಿದ್ದು, ಅಪ್ಪ ಬೆಲ್ಟ್​​ನಿಂದ ಬುದ್ಧಿ ಕಲಿಸಿದ್ದ ಎರಡೂ ವಿಡಿಯೋ ಮಿಕ್ಸಪ್ ಆಗಿ ವೈರಲ್ ಆಗ್ತಿವೆ.

ಅಂದ ಹಾಗೇ ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆ ಹುಡುಗಿ ಇನ್ನೂ ಅಪ್ರಾಪ್ತೆಯಾಗಿದ್ದು, ನೆಟ್ಟಿಗರಲ್ಲಿ ಪರ ವಿರೋಧ ಅಭಿಪ್ರಾಯ, ಚರ್ಚೆ ಶುರುವಾಗಿದೆ. ಆಕೆಗೆ ಥಳಿಸಿರುವುದು ಸರಿ ಅಂತಾ ಕೆಲವರು ವಾದಿಸಿದ್ದರೆ, ಇನ್ನೂ ಕೆಲವರು ಅಷ್ಟೊಂದು ದೊಡ್ಡ ಶಿಕ್ಷೆ ಅಗತ್ಯ ಇರಲಿಲ್ಲ. ಆಕೆ ಅಪ್ರಾಪ್ತಳಾಗಿರುವ ಹಿನ್ನೆಲೆ, ಬೇರೆ ರೀತಿಯಲ್ಲಿ ತಿಳಿಸಿ ಹೇಳಬೇಕಿತ್ತು ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES