Thursday, December 5, 2024

ಶೂಟಿಂಗ್ ಮುಗಿಸಿದ ಬಘೀರ ಚಿತ್ರ ತಂಡ

ಕೆಜಿಎಫ್ ಚಾಪ್ಟರ್ 2ʼ ಮತ್ತು ʼಕಾಂತಾರʼ ಸಿನಿಮಾಗಳ ಮೆಗಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ಬಘೀರ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ʼಲಕ್ಕಿʼ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಘೀರ ಸಿನಿಮಾ 50 ಕೋಟಿ‌ ವೆಚ್ಚದಲ್ಲಿ ನಿರ್ಮಾಣವಾಗಿದೆ. ಚೇತನ್ ಡಿಸೋಜ ಸಾಹಸ ನಿರ್ದೇಶನದಲ್ಲಿ ಎಲ್ಲಾ ಫೈಟ್ಸ್ ಮೂಡಿಬಂದಿದ್ದು.

ಪ್ರಶಾಂತ್ ನೀಲ್ ಕೊಟ್ಟಿರುವ ಒನ್ ಲೈನ್ ಕಥೆಗೆ ಡಾ.ಸೂರಿಯವರು ಚಿತ್ರಕಥೆ ಬರೆದು ಡೈರೆಕ್ಷನ್ ಮಾಡುತ್ತಿದ್ದಾರೆ. ಲಕ್ಕಿ ಸಿನಿಮಾದ ನಂತರ ಡಾ.ಸೂರಿ ನಿರ್ದೇಶನ ಮಾಡ್ತಾ ಇರೋ ಈ ಸಿನಿಮಾಗೆ ಬೇರೆ ಬೇರೆ ತರಹದ ಫೈಟ್ ಕಂಪೋಸ್​​​ ಮಾಡಿದ್ದಾರೆ. ಹಾಲಿವುಡ್ ರೇಂಜ್​​ನಲ್ಲಿ ಸಾಹಸ ದೃಶ್ಯಗಳು ಮೂಡಿಬರುತ್ತಿದ್ದು. ಎ.ಜೆ ಶೆಟ್ಟಿ ಕ್ಯಾಮರ ಕೈ ಚಳಕದಲ್ಲಿ ಬಘೀರ ಅದ್ದೂರಿಯಾಗಿ ತೆರೆ ಮುಂದೆ ಬರಲು ಸಜ್ಜಾಗಿದೆ.

ಅಜನೀಶ್ ಲೋಕನಾಥ್ ಸಂಗೀತ, ರವಿಸಂತೆ ಹಕ್ಲು ಕಲಾ ನಿರ್ದೇಶನ. ಜಾಕಿ ಸಹ-ನಿರ್ದೇಶನ, ಯೋಗಿ.ಜಿ.ರಾಜ್​​​ರವರು ಸೇರಿದಂತೆ ದೊಡ್ಡ ತಂಡವೇ ಬಘೀರ ದೊಡ್ಡ ಮಟ್ಟಕ್ಕೆ ಬರಲು ಕೆಲಸ ಮಾಡುತ್ತಿದ್ದಾರೆ. ಬಘೀರ ಟೀಮ್ ಒಂದೊಳ್ಳೆ ಅದ್ದೂರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವನ್ನ ಚಿತ್ರ ಪ್ರೇಮಿಗಳಿಗೆ ನೀಡಲು ಹಗಲಿರುಳು ಶ್ರಮಿಸುತ್ತಿದೆ.

ಶ್ರೀಮುರಳಿಯವರ ಬರ್ತ್​​​ ಡೇಗೆ ಬಂದ ಟೀಸರ್.. ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದ್ದು. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ.. ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಕಾಶ್ ತುಂಬಿನಾಡು, ಪ್ರಮೋದ್ ಶೆಟ್ಟಿ ಹೀಗೆ ದೊಡ್ಡ ತಾರಬಳಗವೇ ಇದೆ.

RELATED ARTICLES

Related Articles

TRENDING ARTICLES