Monday, July 1, 2024

ಬಿಗ್ ಬಾಸ್ ಖ್ಯಾತಿಯ ಸೀರಿಯಲ್ ನಟಿಗೆ ಸ್ತನ ಕ್ಯಾನ್ಸರ್

ಹಲವು ಖ್ಯಾತ ಸೀರಿಯಲ್​ಗಳಲ್ಲಿ ಮಿಂಚಿರುವ ಸುಂದರಿ. ಜೊತೆಗೆ ಬಿಗ್ ಬಾಸ್​ನಲ್ಲೂ ಚಾರ್ಮ್ ತೋರಿದ್ದ ನಟಿ. ಇನ್ಸ್ಟಾದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಹೊಂದಿರುವ ಈಕೆಗೆ ಸ್ತನ ಕ್ಯಾನ್ಸರ್​. ಅದೂ ಕೂಡ ಥರ್ಡ್ ಸ್ಟೇಜ್​​ನಲ್ಲಿ ಇದೆ ಅನ್ನೋದು ಗೊತ್ತಾಗಿದೆ. ತಕ್ಷಣವೇ ಈ ನಟಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಗ್ಗೆ ಸ್ವತಃ ನಟಿ ಹಿನಾ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು.. ಈ ಮುಂಬೈ ಬೆಡಗಿ ಹಲವು ಸಿನಿಮಾಗಳಲ್ಲೂ ನಟಿಸಿದ್ದಾಳೆ. ಆದ್ರೆ ಮನೆ ಮನೆಯಲ್ಲೂ ಫೇಮಸ್ಸಾಗಿದ್ದು ಮಾತ್ರ ಕಿರುತೆರೆಯಲ್ಲಿ. ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಧಾರಾವಾಹಿಯಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯಾ ರೋಲ್ ಮೂಲಕ ಈಕೆಗೆ ನೇಮು ಫೇಮು ಸಿಕ್ಕಿತ್ತು. ಅಲ್ಲದೇ ಕಸೌಟಿ ಜಿಂದಗಿ ಕೇ – 2 ಸೀರಿಯಲ್​ನಲ್ಲಿ ನೆಗೆಟಿವ್ ರೋಲ್​ನಲ್ಲಿ ಈಕೆ ಮಿಂಚಿದ್ದಾಳೆ.

ಇನ್ನು, ಖತರೋಂಕೆ ಖಿಲಾಡಿ ಮತ್ತು ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿಯ ಬಿಗ್ ಬಾಸ್ ಸೀಸನ್ 10, 12, 15ರಲ್ಲಿ ಈಕೆ ಸ್ಪರ್ಧಿಯಾಗಿದ್ದಳು. ತನ್ನ ಉತ್ತಮ ಅಭಿನಯದಿಂದ ಇಂಡಿಯನ್ ಟೆಲಿ ಅವಾರ್ಡ್ಸ್​​ನಲ್ಲಿ ಏಳು ಬಾರಿ ಗೋಲ್ಡ್ ಮೆಡಲ್​​ಗೆ ಪಾತ್ರಳಾಗಿದ್ದಾಳೆ. ಇಂಥ ನಟಿ ದಿಢೀರನೆ ಸೋಷಿಯಲ್ ಮೀಡಿಯಾದಲ್ಲಿ ತನಗೆ ಬ್ರೆಸ್ಟ್ ಕ್ಯಾನ್ಸರ್ ಅಂತಾ ಪೋಸ್ಟ್ ಹಾಕಿರೋದು ಫಾಲೋವರ್ಸ್​​ಗಳಲ್ಲಿ ಮತ್ತು ಸಹ ಕಲಾವಿದರಲ್ಲಿ ಆಘಾತ ಮೂಡಿಸಿದೆ.

ಇದನ್ನೂ ಓದಿ: ಮದುವೆ ಮರುದಿನವೇ ದಬಂಗ್ ನಟಿ ಸೋನಾಕ್ಷಿ ಸಿನ್ಹಾ ಆಸ್ಪತ್ರೆಗೆ..! ಗರ್ಭಿಣಿಯಾಗಿದ್ದಾಳಾ?

‘‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವದಂತಿಗಳು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಆ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಹೌದು.. ನನಗೆ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಅದು ಕೂಡ ಥರ್ಡ್ ಸ್ಟೇಜ್​​ನಲ್ಲಿ ಇದೆ ಎಂದು ವೈದ್ಯರು ತಿಳಿಸಿದ್ದು, ಅವರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗಾಗಲೇ ನನಗೆ ಚಿಕಿತ್ಸೆ ಆರಂಭವಾಗಿದ್ದು, ಉತ್ತಮವಾಗಿ ಸ್ಪಂದಿಸುತ್ತಿದ್ದೇನೆ. ಇದರಿಂದ ಹೊರಬರುವ ವಿಶ್ವಾಸ ನನಗಿದೆ. ಅಲ್ಲದೇ ಇದರಿಂದ ಹೊರಬರಲು ಅಗತ್ಯ ಇರುವ ಎಲ್ಲಾ ಚಿಕಿತ್ಸೆಗೂ ಮತ್ತು ವೈದ್ಯರ ಸಲಹೆಗೂ ನಾನು ಸಿದ್ಧಳಾಗಿದ್ದೇನೆ’’. ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದ ಶ್ರೀನಗರ ಮೂಲದ ಹಿನಾ ಖಾನ್ ಎಂಬಿಎ ಪದವೀಧರೆಯಾಗಿದ್ದು, ಮಾಡೆಲ್ ಮತ್ತು ನಟಿಯಾಗಿ ಗುರ್ತಿಸಿಕೊಂಡು ಮುಂಬೈನಲ್ಲಿ ನೆಲೆಸಿದ್ದಾರೆ. ಹೆಕ್​ಲ್ಡ್​, ಅನ್​ಲಾಕ್, ವಿಶ್​ಲಿಸ್ಟ್, ಲೈನ್ಸ್ ಎಂಬ ಸಿನಿಮಾಗಳಲ್ಲೂ ಈಕೆ ನಟಿಸಿದ್ದಾರೆ. ಕೆಲ ಚಿತ್ರಗಳಿಗೆ ಸಹ ನಿರ್ಮಾಪಕಿಯಾಗಿ ಹೂಡಿಕೆಯನ್ನೂ ಮಾಡಿದ್ದಾರೆ ಹಿನಾ ಖಾನ್. ಈಕೆ ಶೀಘ್ರ ಗುಣಮುಖಳಾಗಲಿ ಅಂತಾ ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಫಾಲೋವರ್ಸ್ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.

RELATED ARTICLES

Related Articles

TRENDING ARTICLES