Sunday, September 8, 2024

ರೇಣುಕಾಸ್ವಾಮಿ ಕೊಲೆ ಪ್ರಕರಣ: A1 ಆರೋಪಿ ಪವಿತ್ರಾ ಗೌಡ ಜೈಲಿಗೆ,ದರ್ಶನ್​ ಪೊಲೀಸ್​ ಕಸ್ಟಡಿಗೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಆ್ಯಂಡ್‌  ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಗುರುವಾರ ಪೊಲೀಸ್‌ ಕಸ್ಟಡಿ ಅವಧಿ ಮುಗಿದ ಕಾರಣ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್‌ ಸೇರಿ 13 ಆರೋಪಿಗಳನ್ನು ಗುರುವಾರ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಎ 1 ಪವಿತ್ರಾ ಗೌಡ ಸೇರಿ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದೆ.

ಪ್ರಕರಣದ ತನಿಖೆಯೂ ಬೇರೆ ಬೇರೆ ಆಯಾಮಗಳಿಂದ ನಡೆಯುತ್ತಿದ್ದೂ ಡಿಗ್ಯಾಂಗ್​ ನ ಕ್ರೂರತೆ ಮತ್ತಷ್ಟು ಬಯಲಿಗೆ ಬರುತ್ತಿರುವ ಹಿನ್ನೆಲೆ ದರ್ಶನ್‌ ಸೇರಿ ಆರು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು, ಪವಿತ್ರಾ ಗೌಡ ಸೇರಿ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂಬುದಾಗಿ ಪೊಲೀಸರು ಎರಡು ಪ್ರತ್ಯೇಕ ರಿಮ್ಯಾಂಡ್‌ ಅಪ್ಲಿಕೇಷನ್‌ ಸಲ್ಲಿಸಿದ್ದರು.

ಇದನ್ನೂ ಓದಿ: ನಟ ದರ್ಶನ್​ ಅಭಿಮಾನಿಗಳಿಂದ ಒಳ್ಳೆ ಹುಡುಗ ಪ್ರಥಮ್​ಗೆ ಜೀವಬೆದರಿಕೆ ಕರೆ: ದೂರು ದಾಖಲು

ಅದರಂತೆ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರು ವಾದ ಮಂಡಿಸಿದರು. ಕೊನೆಗೆ ನ್ಯಾಯಾಲಯವು ಎಸ್‌ಪಿಪಿ ಅವರ ವಾದವನ್ನು ಪುರಸ್ಕರಿಸಿ ದರ್ಶನ್, ವಿನಯ್‌, ಪ್ರದೋಶ್, ನಾಗರಾಜ್, ಲಕ್ಷ್ಮಣ್‌, ಧನರಾಜ್‌ ಅವರ ಪೊಲೀಸ್‌ ಕಸ್ಟಡಿಯನ್ನು ಮುಂದುವರಿಸಿದರು. ಪವಿತ್ರಾ ಗೌಡ ಸೇರಿ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರನ್ನು ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗುತ್ತದೆ.

ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಕೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲುಗಳು, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಒಂಬತ್ತು ದಿನಗಳ ಕಾಲ ದರ್ಶನ್‌ ಅಲಿಯಾಸ್‌ ಡಿ ಬಾಸ್‌ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾನೆ.

 

RELATED ARTICLES

Related Articles

TRENDING ARTICLES