Saturday, July 6, 2024

‘ಕೇD’ ಗ್ಯಾಂಗ್​ಗೆ ಜೈಲಾ? ಪೊಲೀಸ್​​​ ಕಸ್ಟಡಿನಾ?: ದರ್ಶನ್‌ಗೆ ಸಪೋರ್ಟ್‌ ಮಾಡುವ ಪ್ರಮೇಯವೇ ಇಲ್ಲ: ಸಿಎಂ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಮತ್ತು ಆತನ ಗೆಳತಿ ಪವಿತ್ರಾಗೌಡ ಪೊಲೀಸ್‌ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಇವರಿಬ್ಬರ ಜೊತೆಗೆ ಇನ್ನಿತರ 17 ಆರೋಪಿಗಳ ಕಸ್ಟಡಿ ಕೂಡ ಕೊನೆಗೊಳ್ಳಲಿದೆ. ಹೀಗಾಗಿ, ಇಂದು ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಎರಡನೇ ಬಾರಿಗೆ ಪೊಲೀಸ್ ಕಸ್ಟಡಿ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯದ ಎದುರು ಆರೋಪಿಗಳನ್ನು ಪೊಲೀಸರು ಹಾಜರಿಪಡಿಸಲಿದ್ದಾರೆ. ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮತ್ತೆ ಪೊಲೀಸ್‌ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಒಂದು ವೇಳೆ ಪೊಲೀಸರು ಕಸ್ಟಡಿಗೆ ಕೇಳದಿದ್ದರೆ ದರ್ಶನ್‌ ಸೇರಿ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಗಳಿದೆ.

ದರ್ಶನ್‌ಗೆ ನಾಲ್ವರು ಆಪ್ತರಿಂದಲೇ ಆಪತ್ತು!:

ನಟ ದರ್ಶನ್‌ಗೆ ಆಪ್ತರಿಂದಲೇ ಆಪತ್ತು ಶುರುವಾಗಿದೆ. ದರ್ಶನ್ ವಿರುದ್ಧ ನಾಲ್ವರು ಆಪ್ತರಿಂದಲೇ ಸಾಕ್ಷ್ಯ ಲಭ್ಯವಾಗಿದೆ. ಶೆಡ್‌ ಕಾವಲುಗಾರ, ಮೂವರು ಸಹಚರರು ನೀಡಿದ ಹೇಳಿಕೆ ದಾಖಲಿಸಲಾಗಿದೆ.

ನ್ಯಾಯಾಲಯದಲ್ಲಿ ಪೊಲೀಸರು ಸಾಕ್ಷ್ಯ ಹೇಳಿಕೆ ದಾಖಲಿಸಿದ್ದಾರೆ. ಸಿಆರ್‌ಪಿಸಿ 164ರ ಅಡಿ ಕೋರ್ಟ್‌ನಲ್ಲಿ ಹೇಳಿಕೆ ದಾಖಲು ಮಾಡಲಾಗಿದೆ. ದರ್ಶನ್‌ ವಿರುದ್ಧ ಆಪ್ತರೇ ಸಾಕ್ಷಿಗಳಾಗಿ ಹೇಳಿಕೆ ಹಿನ್ನೆಲೆ ನಟ ದರ್ಶನ್‌ಗೆ ಮತ್ತಷ್ಟು ಕಂಟಕವಾಗೋ ಸಾಧ್ಯತೆಯಿದೆ. ಪಟ್ಟಣಗೆರೆ ಶೆಡ್‌ನ ಕಾವಲುಗಾರ, ಗೋವಿಂದರಾಜು, ಪುನಿತ್, ವಿನಯ್‌ರಿಂದ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.

ಇದನ್ನೂ ಓದಿ: ದರ್ಶನ್​ ಆಪ್ತಗೆಳತಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ʻಡಿʼ ಗ್ಯಾಂಗ್‌ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು:

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧ ಪೊಲೀಸರು ಒಟ್ಟು 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರಂಭದಲ್ಲಿ 302, 201 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ತನಿಖೆ ವೇಳೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ದರ್ಶನ್‌ಗೆ ಸಪೋರ್ಟ್‌ ಮಾಡುವ ಪ್ರಮೇಯವೇ ಇಲ್ಲ’:

ಆಪ್ತ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಶಾಕ್‌ ನೀಡಿದ್ದಾರೆ. ನಟ ದರ್ಶನ್‌ ಕುರಿತ ಒತ್ತಡಕ್ಕೆ ಸಿಎಂ ಸಿದ್ದರಾಮಯ್ಯ ಡೋಂಟ್‌ ಕೇರ್ ಎನ್ನುತ್ತಿದ್ದಾರೆ. ಪ್ರಭಾವಿ ಸಚಿವರ ಒತ್ತಡಕ್ಕೆ ಸಿದ್ದರಾಮಯ್ಯ ಅವರು ಮಣಿಯುತ್ತಿಲ್ಲ. ಏನೇ ಇದ್ದರೂ ತನಿಖೆ ಆಗಲಿ, ಒತ್ತಡಕ್ಕೆ ಮಣಿಯೋಲ್ಲ. ಈ ಮೂಲಕ ನೋ ಕಾಂಪ್ರಮೈಸ್‌ ಎನ್ನುತ್ತಿದ್ದಾರೆ. ತನಿಖೆ ನಡೆಯಲಿ ಯಾರದ್ದು ತಪ್ಪು, ಸರಿ ಗೊತ್ತಾಗಲಿದೆ. ಯಾರೊಬ್ಬರ ರಕ್ಷಣೆಗೆ ನಿಲ್ಲೋದು ಬೇಡ ಎಂಬ ಸಂದೇಶ ನೀಡಿದ್ದಾರೆ. ದರ್ಶನ್‌ಗೆ ಸಪೋರ್ಟ್‌ ಮಾಡುವ ಪ್ರಮೇಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES