Thursday, June 27, 2024

ದರ್ಶನ್​ ಪ್ರಕರಣದಲ್ಲಿ 5 ದೇವತೆಗಳ ಪ್ರಭಾವ ಹೆಚ್ಚಾಗಿದೆ!: ಬಸವರಾಜ ಗುರೂಜಿ

ಕೊಲೆ ಪ್ರಕರಣಲ್ಲಿ ನಟ ದರ್ಶನ್​ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದರಿಸುತ್ತಿದ್ದಾರೆ. ಈ ಪ್ರಕರಣದ ತನಿಖೆ ಆರಂಭವಾದಗಿನಿಂದ ಅಚ್ಚರಿಯ ಬೆಳವಣಿಗೆಗಳು ಹೊರಬರುತ್ತಿದ್ದು ದರ್ಶನ್​ಗೆ ಸಂಕಷ್ಟಗಳು ಹೆಚ್ಚುತ್ತಲೇ ಇದೆ.  ಇದಕ್ಕೆಲ್ಲಾ ಮೂಲ 5 ದೇವತೆಗಳ ಪ್ರಭಾವ ಎಂದು ಜೋತಿಷಿ ಡಾ.ಬಸವರಾಜ್​ ಗುರೂಜಿಯವರು ತಿಳಿಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ A2 ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ ಈ ಪ್ರಕರಣದಲ್ಲಿ ಪ್ರಮುಖವಾಗಿ ರಾಜರಾಜೇಶ್ವರಿ (ನಗರ), ಕಾಮಾಕ್ಷಿ(ಪಾಳ್ಯ), ಅನ್ನಪೂರ್ಣೇಶ್ವರಿ (ಪೊಲೀಸ್ ಠಾಣೆ), ರೇಣುಕಾ (ಸ್ವಾಮಿ), ವಿಜಯಲಕ್ಷ್ಮಿ ಈ ಐದು ಹೆಣ್ಣು ದೇವತೆಗಳ ಪ್ರಭಾವ ಸ್ಪಷ್ಟವಾಗಿ ಗೋಚರವಾಗುತ್ತಿದ್ದು ಇದರ ಫಲಿತಾಂಸ ತೀವ್ರವಾಗಿ ಗೋಚರವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಕಿಲ್ಲಿಂಗ್​ ಸ್ಟಾರ್​ ದರ್ಶನ್​ ಮನೆ ಉಡೀಸ್​?

ದರ್ಶನ್ ಆಪ್ತ ಗೆಳತಿ ಪವಿತ್ರಾಗೌಡ ಗೆ ಅಶ್ಲೀಲ ಮೆಸೇಜ್ ಕಳಿಸಿದ ಎಂಬ ಕಾರಣಕ್ಕೆ ನಟ ದರ್ಶನ್​ ಅಂಡ್​ ಗ್ಯಾಂಗ್​ ತನ್ನ ಅಭಿಮಾನಿಯೂ ಆಗಿರುವ ಚಿತ್ರದುರ್ಗದ ಮೂಲದ ರೆಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿರುವ ಶೆಡ್​ ನಲ್ಲಿರಿಸಿ ಹಲ್ಲೆ ನಡೆಸಿ ಕೊಲೆ ಮಾಡಿ, ಇದೀಗ ಪೊಲೀಸರ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES