Saturday, July 6, 2024

ದರ್ಶನ್​ ಕರಾಳ ಮುಖ ಬಯಲು: ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ವಿಕೃತಿ

ಮೈಸೂರು : ತನ್ನ ಅಭಿಮಾನಿಯ ಕಿಡ್ನಾಪ್​ ಮತ್ತು ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. 10 ವರ್ಷದ ಹಿಂದೆ ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್‌ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್‌ ಎಂಬವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಎತ್ತಿಗೆ ಲಾಳ ಕಟ್ಟಿಸಲು ಹೋದ ಸಂದರ್ಭದಲ್ಲಿ ಎತ್ತು ಮಹೇಶ್ ಅವರ ಕಣ್ಣಿಗೆ ತಿವಿದಿತ್ತು. ಕೊಂಬು ತಲೆಯಿಂದ ಹೊರಬಂದಿತ್ತು. ದರ್ಶನ್‌ ಕಡೆಯುವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು. ನಂತರ ಕುಟುಂಬದತ್ತ ತಿರುಗಿಯೂ ನೋಡಿಲ್ಲ.

ಇದನ್ನೂ ಓದಿ: ದರ್ಶನ್‌ಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ದ ಅಧಿಕಾರಿಗಳು ಗರಂ

ಪರಿಹಾರ ಕೇಳಲು ಫಾರಂ ಹೌಸ್ ಬಳಿ ಹೋದಾಗ ಸಾಕು ನಾಯಿ ಛೂ ಬಿಟ್ಟು ಪರಿಹಾರ ಕೇಳಲೂ ಹೋದವರಿಗೆ ಬೆದರಿಸಿದ್ದಾರೆ. ಅಲ್ಲದೇ ಮೈಸೂರಿನ ಹೋಟೆಲಿಗೆಂದು ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆಯೊಡಿದ್ದರು ಎಂದು ಮಹೇಶ್‌ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES