Sunday, September 8, 2024

14-15 ಸೀಟು ಬರುತ್ತೆ ಅಂತ ಭರವಸೆ ಇತ್ತು: ಡಿಕೆ ಶಿವಕುಮಾರ್​

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳು ಸಿಗದ ಹಿನ್ನೆಲೆ ಕಾಂಗ್ರೆಸ್​ ನಡೆಸಿದ ಪರಾಮರ್ಷೆ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ದೆಹಲಿಯಲ್ಲೂ ಹೇಳಿದ್ದಾರೆ. ರಾಹುಲ್ ಗಾಂಧಿ ಬಂದಾಗಲೂ ಇದನ್ನು ಹೇಳಿದ್ದರು. ಇಂದು ಬೆಂಗಳೂರು ಮೀಟಿಂಗ್ ಇದೆ. ಯಾರೂ ಮೀಡಿಯಾಗೇ ಮಾತಾಡಬಾರದು ಅಂತ ಹೇಳಿದ್ದೇವೆ. ಏನೇನಾಗಿದೆ ಅನ್ನೋದಕ್ಕೆ ಪರಿಹಾರ ಮಾಡಿಕೊಳ್ಳಬೇಕು. ಎಲ್ಲಿ ತಪ್ಪಾಗಿದೆ ಅದನ್ನ ನೋಡಿಕೊಳ್ಳಬೇಕಾಗುತ್ತದೆ. ಇದೊಂದು ಎಚ್ಚರಿಕೆ ಗಂಟೆಯಾಗಿದೆ ನಮಗೆ. ನಾವು ಹದಿನಾಲ್ಕು ಹದಿನೈದು ಸೀಟು ಬರುತ್ತೆ ಅಂತ ಭರವಸೆ ಇತ್ತು. ಆದರೆ ಇದು ಬರಲಿಲ್ಲ ಕಡಿಮೆ ಸ್ಥಾನ ಬಂದಿದೆ. ಜನ ತೀರ್ಪು ಕೊಟ್ಟಿದ್ದಾರೆ.

ಇದನ್ನೂ ಓದಿ: ದೊಡ್ಮನೆಯಲ್ಲಿ ಡಿವೋರ್ಸ್​ ಬಿರುಗಾಳಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಯುವರಾಜ್​ ಕುಮಾರ್​

ಬೇರೆ ಬೇರೆ ಶಾಸಕರ, ಸಚಿವರ ಕ್ಷೇತ್ರದಲ್ಲಿ ಲೀಡ್ ಕಡಿಮೆಯಾಗಿದೆ. ನನ್ನ ಕ್ಷೇತ್ರದಲ್ಲೇ ಕಡಿಮೆ ಆಗಿದೆ. ಅದಕ್ಕೆ ಸಬೂಬು ಹೇಳಿದರೆ ಆಗುತ್ತಾ. ನಾವು ಜವಬ್ದಾರಿ ತೆಗೆದುಕೊಂಡರೇ ಅದರ ಬಗ್ಗೆ ಮಾತನಾಡಬೇಕಾಗುತ್ತದೆ ಎಂದರು.

ಇನ್ನು ಕೆಲವು ಸಚಿವರ ಮಕ್ಕಳ ಸೋಲಿಗೆ ಆಯಾ ಕ್ಷೇತ್ರದ ಶಾಸಕರು ಸಹಕಾರ ನೀಡಿಲ್ಲ ಎಂದು ಅಧ್ಯಕ್ಷರಿಗೆ ದೂರು ನೀಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ನನ್ನನ್ನು ಯಾರೂ ಭೇಟಿಯಾಗಿಲ್ಲ, ಯಾರು ಬಂದು ದೂರು ಕೊಟ್ಟಿಲ್ಲ, ಯಾರಮೇಲೆ ಕೊಟ್ರೂ ಸುಖ ಇಲ್ಲ, ನಾವು ನಮ್ಮ ನಮ್ಮ ಏರಿಯಾದಲ್ಲಿ ಯಾರಿಗೆ ಜವಾಬ್ದಾರಿ ಕೊಟ್ಟಿದ್ದೇವೆ ಅವರೇ ಅದಕ್ಕೆ ಉತ್ತರ ಕೊಡಬೇಕು. ಜನರ ಬಳಿ ಮಾತನಾಡಬೇಕು, ಎಲ್ಲಿ ತಪ್ಪಾಗಿದೆ? ಈಗ ಏನು ಮಾಡಬೇಕು? ಅದಕ್ಕೇನು ಪರಿಹಾರ ಕಂಡುಕೊಳ್ಳಬೇಕು ಎಂದರು.

RELATED ARTICLES

Related Articles

TRENDING ARTICLES