Monday, July 8, 2024

ರೇವಣ್ಣ ಅರ್ಜಿ ವಿಚಾರಣೆ ಜೂನ್ 7ಕ್ಕೆ ಮುಂದೂಡಿಕೆ: ಭವಾನಿ ಹುಡುಕಾಟಕ್ಕೆ 4 ವಿಶೇಷ ತಂಡ ರಚನೆ

ಬೆಂಗಳೂರು: ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಕಿಡ್ನಾಪ್​​​​ ಕೇಸ್​​ಗಳನ್ನು ರದ್ದು ಮಾಡಬೇಕೆಂದು ಮಾಜಿ ಸಚಿವ H.D.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಸದ್ಯ ಅತ್ಯಾಚಾರ ಸಂತ್ರಸ್ತೆ ಕಿಡ್ನ್ಯಾಪ್​ ಕೇಸ್​ನಲ್ಲಿ ರೇವಣ್ಣ ಬೇಲ್​ ಮೇಲೆ ಹೊರಗಿದ್ದಾರೆ.

ಭವಾನಿ ಹುಡುಕಾಟಕ್ಕೆ SITಯಿಂದ 4 ವಿಶೇಷ ತಂಡ ರಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣಗಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಅವರು ಬಂಧನ ಭೀತಿಯಲ್ಲಿದ್ದು, ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಶುಕ್ರವಾರ ಭವಾನಿ ರೇವಣ್ಣ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಬಳಿಕ ಎಸ್‌ಐಟಿ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸುತ್ತಿದೆ.

ಇದನ್ನೂ ಓದಿ: ಕುರಿ, ಕೋಳಿ ಬಲಿ ಹೊಡೆದಿರೋ ಬಗ್ಗೆ SIT ತನಿಖೆ ಮಾಡಿಸ್ಲಿ: ಡಿಕೆಶಿ ಗೆ HDK ತಿರುಗೇಟು

ಶನಿವಾರ ಹೊಳೆನರಸೀಪುರ ನಿವಾಸದಲ್ಲಿ ಸಂಜೆಯ ತನಕ ಕಾದರೂ ಸಹ ಭವಾನಿ ರೇವಣ್ಣ ವಿಚಾರಣೆಗೆ ಆಗಮಿಸಿಲ್ಲ. ಭವಾನಿ ರೇವಣ್ಣ ಬಂಧನಕ್ಕಾಗಿಯೇ ಎಸ್‌ಐಟಿ 4 ವಿಶೇಷ ತಂಡಗಳನ್ನು ರಚನೆ ಮಾಡಿದೆ. ಮತ್ತೊಂದು ಕಡೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದಲ್ಲಿದ್ದು, ಅವರ ವಿಚಾರಣೆ ಸಹ ನಡೆಯುತ್ತಿದೆ.

ಪ್ರಜ್ವಲ್​ ಗೆ ಮೆಡಿಕಲ್​ ಟೆಸ್ಟ್​:

ಅತ್ಯಾಚಾರಿ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಇಂದು ಮೆಡಿಕಲ್ ಟೆಸ್ಟ್ ನಡೆಸಲಾಯಿತು. SIT ಅಧಿಕಾರಿಗಳು ಅಂಬುಲೆನ್ಸ್​ನಲ್ಲಿ ಮೆಡಿಕಲ್ ಟೆಸ್ಟ್​ಗೆ ಕರೆದೊಯ್ದರು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ ಜೊತೆಗೆ ವಿಶೇಷ ಮೆಡಿಕಲ್ ಟೆಸ್ಟ್ ಗೆ ಪ್ರಜ್ವಲ್ ರೇವಣ್ಣ ಅವರನ್ನು ಒಳಪಡಿಸಲಾಯಿತು.

RELATED ARTICLES

Related Articles

TRENDING ARTICLES