Sunday, September 8, 2024

ಕುರಾನ್​ ಪಠಿಸಲು ಬರುತ್ತಿದ್ದ ಬಾಲಕಿ ಮೇಲೆ ಮೌಲ್ವಿಯಿಂದ ಲೌಂಗಿಕ ದೌರ್ಜನ್ಯ

ಚಿತ್ರದುರ್ಗ: ಕುರಾನ್​ ಪಠಿಸಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಮೌಲ್ವಿಯೇ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿರುವ ಘಟನೆ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಚಿತ್ರದುರ್ಗದ ಮಸೀದಿಯಲ್ಲಿ ಕುರಾನ್​ ಪಠಿಸಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಳಿ ಸೋಕಿದೆ ಪೂಜೆ ಮಾಡಬೇಕು ಎಂದು ಹೇಳಿದ ಹಜರತ್​ ಮೌಲ್ವಿ ಪೂಜೆಯನ್ನು ಮಸೀದಿಯಲ್ಲಿ ಬೇಡ ಎಂದು ಬಾಲಕಿಯ ಮನೆಯಲ್ಲಿಯೇ ಪೂಜೆಗೆ ಏರ್ಪಾಡು ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಗೃಹಪ್ರವೇಶದ ಊಟ ಸೇವಿಸಿ ಓರ್ವ ವೃದ್ದೆ ಸಾವು, ಹಲವರು ಅಸ್ವಸ್ಥ

ಈ ವೇಳೆ ಬಾಲಕಿಗೆ ದೆವ್ವ ಮೆಟ್ಟಿದೆ, ದೈಹಿಕ ಸುಖ ಕೊಟ್ರೆ ದೂರವಾಗುತ್ತೆ ಎಂದು ಹೇಳಿ ವಂಚಿಸಿದ್ದಾನೆ. ಬಳಿಕ ಬಾಲಕಿಯ ಸಹೋದರನಿಗೂ ಅತ್ಯಾಚಾರ ಮಾಡುವಂತೆ ಪ್ರೇರೇಪಿಸಿದ್ದಾನೆ. ಈ ಘಟನೆ ಸಂಬಂಧ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES