Sunday, September 8, 2024

ಲವ್​ ಜಿಹಾದ್​: ಶ್ರೀರಾಮಸೇನೆ ಹೆಲ್ಪ್ ಲೈನ್​​ಗೆ ಬೆದರಿಕೆ ಕರೆಗಳು

ಬೆಂಗಳೂರು: ರಾಜ್ಯದಲ್ಲಿ ಲವ್​ ಜಿಹಾದ್​ಗೆ ಸಿಲುಕಿದ ಹಿಂದೂ ಯುವತಿಯರು ಹಾಗೂ ಮಹಿಳೆಯರ ರಕ್ಷಣೆಗಾಗಿ ಶ್ರೀರಾಮಸೇನೆ ಸಹಾಯವಾಣಿ ಕೇಂದ್ರ ಆರಂಭಿಸಿದ್ದು ಈ ಸಹಾಯವಾಣಿ ಕೇಂದ್ರಕ್ಕೆ ಬೆದರಿಕೆ ಕರೆಗಳು ಬಂದಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಲವ್ ಜಿಹಾದ್‌ನಲ್ಲಿ ಸಿಲುಕಿದ ಹಿಂದೂ ಯುವತಿಯರ ರಕ್ಷಣೆಗೆ ಮೇ 29 ರಂದು ಶ್ರೀರಾಮಸೇನೆ ಸಹಾಯವಾಣಿ ಆರಂಭಸಿತ್ತು. ನಾಲ್ಕು ದಿನಗಳಲ್ಲಿ 400ಕ್ಕೂ ಅಧಿಕ ಕರೆಗಳು ಬಂದಿವೆ ಈ ಪೈಕಿ ನಾಲ್ಕು ದಿನದಲ್ಲಿ 17 ಬೆದರಿಕೆ ಕರೆಗಳು ಬಂದಿವೆ ಎಂದಿದ್ದಾರೆ.

ಇದನ್ನೂ ಓದಿ: ವರುಣಾರ್ಭಟ: ಮನೆಗಳಿಗೆ ನುಗ್ಗಿದ ಮಳೆ ನೀರು, ಕೆಲಕಚ್ಚಿದ 118 ಮರಗಳು

ಸಹಾಯವಾಣಿ ಕೇಂದ್ರಕ್ಕೆ 37 ಜನ ತಾಯಂದಿರು, 42 ಪ್ರೋತ್ಸಾಹಕ ಕತೆಗಳು, 52 ಜನ ಲವ್ ಜಿಹಾದ್​ನಲ್ಲಿ ಸಿಲುಕಿರುವ ಸಂತ್ರಸ್ತೆಯರು ಕರೆ ಮಾಡಿದ್ದಾರೆ. ಅಲ್ಲದೆ ನಮ್ಮ ಕಾರ್ಯಕ್ಕೆ ಅಭಿನಂದಿಸಿ ಮಹಿಳೆಯರು, ವಕೀಲರು ಮತ್ತು ಕೆಲ ಮಾಧ್ಯಮದವರೂ ಕರೆ ಮಾಡಿ ಒಳ್ಳೆ ಕಾರ್ಯ ಮಾಡುತ್ತಿದ್ದೀರಿ ಎಂದು ಹಾರೈಸುತ್ತಿದ್ದಾರೆ. ಆದರೆ ಈ ಮಧ್ಯೆ 17 ಬೆದರಿಕೆ ಕರೆಗಳು ಕೂಡ ಬಂದಿವೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES