Tuesday, July 9, 2024

ವರುಣಾರ್ಭಟ: ಬೆಸ್ಕಾಂ ಹೆಲ್ಪ್​ ಲೈನ್​ನಲ್ಲಿ 8 ಸಾವಿರಕ್ಕೂ ಅಧಿಕ ದೂರು ದಾಖಲು

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಬೆಸ್ಕಾಂ ಹೆಲ್ಪ್​ಲೈನ್​ಗೆ ಎಂಟು ಸಾವಿರಕ್ಕೂ ಅಧಿಕ ದೂರುಗಳು ಬಂದಿರುವುದು ವರದಿಯಾಗಿದೆ.

ರಾಜ್ಯ ಹವಾಮಾನ ಇಲಾಖೆಯೂ ರಾಜ್ಯದ್ಯಂತ ಜೂನ್​ ಮೊದಲವಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆ ಯಾವುದೇ ವಿದ್ಯುತ್​ ಅವಘಡಗಳು ಸಂಭವಿಸಿದರೂ ಬೆಸ್ಕಾಂ ಹಲ್ಪ್​ ಲೈನ್​ಗೆ ಕರೆ ಮಾಡಿ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ವರುಣಾರ್ಭಟ: ಮನೆಗಳಿಗೆ ನುಗ್ಗಿದ ಮಳೆ ನೀರು, ಕೆಲಕಚ್ಚಿದ 118 ಮರಗಳು

ಭಾನುವಾರ ರಾತ್ರಿ ಬೆಂಗಳೂರಿನಾದ್ಯಂತ ದಾಖಲೆ ಮಟ್ಟದ ಮಳೆ ಸುರಿದ ಹಿನ್ನೆಲೆ ನಗರದ ಹಲವೆಡೆ ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು ಭಾರಿ ಅವಘಡಗಳು ಸಂಭವಿಸಿದ ಹಿನ್ನೆಲೆ ಬೆಸ್ಕಾಂನ ಹೆಲ್ಪ್​ಲೈನ್​ 1912ಗೆ ಬರೊಬ್ಬರಿ 8745 ದೂರುಗಳು ಬಂದಿರುವುದು ವರದಿಯಾಗಿದೆ.

ಬೆಂಗಳೂರಿನ ಹಲವೆಡೆ ಸುರಿದ ಮಳೆಯಿಂದಾಗಿ 74 ವಿದ್ಯುತ್​ ಕಂಬಗಳಿಗೆ ಹಾನಿಯಾಗಿದ್ದು, 102 ವಿದ್ಯುತ್​ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿವೆ, 9 ಟ್ರಾನ್ಸ್​ಫಾರ್ಮರ್​ಗಳಿಗೆ ಹಾನಿಯಾಗಿದೆ ಇದರೊಂದಿಗೆ ಬೆಸ್ಕಾಂಗೆ ಕೋಟ್ಯಾಂತರ ರೂ. ಗಳಷ್ಟು ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES