Sunday, September 8, 2024

ಎಕ್ಸಿಟ್​​ ಪೋಲ್​​ನಲ್ಲಿ NDAಗೆ ಬಹುಪರಾಕ್​ ಬೆನ್ನಲ್ಲೇ ಪ್ರಧಾನಿಯಿಂದ ಸರಣಿ ಸಭೆ ಇಂದು

ನವದೆಹಲಿ: ಲೋಕಸಬಾ ಚುನಾವಣೆ ಪ್ರಚಾರದ ಬಳಿಕ ಪ್ರಧಾನಿ ಮೋದಿ ಮತ್ತೆ ಆ್ಯಕ್ಟೀವ್​ ಆಗಿದ್ದು ಸಾಲು ಸಾಲು ಸರಣಿ ಸಭೆ ನಡೆಸಲು ಮುಂದಾಗಿದ್ದಾರೆ.

ಇಂದು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಏಳು ಸಭೆಗಳನ್ನು ನಡೆಸಲು ಸಿದ್ದತೆ ನಡೆಸಿದ್ದಾರೆ. ಇದರಲ್ಲಿ ರೆಮೆಲ್ ಚಂಡಮಾರುತ ಪರಿಶೀಲನೆ ಸಭೆ, ಈಶಾನ್ಯ ರಾಜ್ಯಗಳು & ಉತ್ತರ ರಾಜ್ಯಗಳ ಬಿಸಿಗಾಳಿ ವಿಚಾರ, ಸರ್ಕಾರದ ಮುಂದಿನ 100 ದಿನಗಳ ಅಜೆಂಡಾ ಕುರಿತು ಚರ್ಚೆ, ವಿಶ್ವ ಪರಿಸರ ಆಚರಣೆ ಸಿದ್ದತೆ ಕುರಿತು ಸಭೆ, ರೆಮಲ್ ಚಂಡಮಾರುತದದಿಂದ ಆದ ಹಾನಿ ಬಗ್ಗೆ ಚರ್ಚೆ, ಚಂಡಮಾರುತದಿಂದ ಉಂಟಾದ ಹಾನಿಗೆ ಪರಿಹಾರದ ಬಗ್ಗೆ ಮಾಹಿತಿ, ಜೂನ್ 5 ರಂದು ಆಚರಿಸಲಾಗುವ ವಿಶ್ವ ಪರಿಸರ ದಿನದ ಸಿದ್ಧತೆಗಳ ಬಗ್ಗೆ ಸಿದ್ದಾತ ಸಭೆಗಳನ್ನು ನಡೆಸಲಾಗುತ್ತದೆ ಇದರ ಉದ್ದೇಶ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಉತ್ತೇಜಿಸುವುದು, ಈ ವರ್ಷದ ಥೀಮ್ ಭೂಮಿ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ ಆಗಿದೆ. ಇವು ಇಂದಿನ ಸಭೆಯಗಳಲ್ಲಿ ಪ್ರಮುಖವಾದವುಗಳಾಗಿದೆ.

ಇದನ್ನು ಓದಿ:  ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಭವಿಷ್ಯ- ಮೋದಿ ಪ್ರತಿಕ್ರಿಯೆ

ಎಕ್ಸಿಟ್​ ಪೋಲ್ ಸಮೀಕ್ಷೆ; ಎನ್​ಡಿಎಗೆ ಮುನ್ನಡೆ

ದೇಶಾದ್ಯಂತ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯೂ, ಮೇ 01 ರಂದು ನಡೆದ ಮತದಾನ ಪ್ರಕ್ರಿಯೊಂದಿಗೆ ಎಲ್ಲಾ ಹಂತಗಳು ಮುಕ್ತಾಯವಾಗಿದೆ. ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಅದೇ ದಿನ ಸಂಜೆ ಕೆಲವು ಮಾದ್ಯಮ ಸಂಸ್ಥೆಗಳು ಎಕ್ಸಿಟ್​ ಪೋಲ್​ ನಡೆಸಿ ಬಿಜೆಪಿಗೆ ಮುನ್ನಡೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. ಇದರೊಂದಿಗೆ ಮತ್ತೆ ಮೋದಿ ಸರಣಿ ಸಭೆಗಳನ್ನು ನಡೆಸಲು ಉತ್ಸುಕರಾಗಿದ್ದಾರೆ.

RELATED ARTICLES

Related Articles

TRENDING ARTICLES