Sunday, September 8, 2024

7th Phase Loksabha Election: ಇಂದು ಅಂತಿಮ ಹಂತದ ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಈಗಾಗಲೇ 6 ಹಂತಗಳ ಮತದಾನ ಯಶಸ್ವಿಯಾಗಿ ಮುಗಿದಿದ್ದು, ಇಂದು 7ನೇ ಹಾಗೂ ಕಟ್ಟ ಕಡೆಯ ಹಂತದ ಮತದಾನ ನಡೆಯುತ್ತಿದೆ. 10 ಗಂಟೆ ವೇಳೆಗೆ 11.64% ಮತದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂತಿಮ ಹಂತದ ಲೋಕಸಭಾ ಚುನಾವಣೆಯಲ್ಲಿ 8 ರಾಜ್ಯಗಳು, ಕೇಂದ್ರಾಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರದಲ್ಲಿ 904 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳು, ಉತ್ತರಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳ 09, ಬಿಹಾರ 08, ಒಡಿಶಾ 06, ಹಿಮಾಚಲ ಪ್ರದೇಶ04, ಜಾರ್ಖಂಡ್ 03, ಕೇಂದ್ರಾಡಳಿ ಪ್ರದೇಶದ ಚಂಡೀಗಢ 01 ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದೆ.

ಇದನ್ನೂ ಓದಿ: ಪ್ರಜ್ವಲ್ ವಿಚಾರಣೆ ಹೊಣೆ ಲೇಡಿ ಪೊಲೀಸ್ ಟೀಂ ಹೆಗಲಿಗೆ

ಇದಲ್ಲದೆ ಒಡಿಶಾ ವಿಧಾನಸಭೆ ಚುನಾವಣೆಯ ಬಾಕಿಯಿರುವ 42 ಕ್ಷೇತ್ರಗಳು ಮತ್ತು ಹಿಮಾಚಲಪ್ರದೇಶ 06 ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯುತ್ತಿದೆ. ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶವು ಇದೇ ಜೂನ್‌ 4ರಂದು ಹೊರಬೀಳಲಿದೆ.

RELATED ARTICLES

Related Articles

TRENDING ARTICLES