Monday, July 8, 2024

ಪ್ರಜ್ವಲ್ ರೇವಣ್ಣ ಬಂಧನ: ದೂರು ಕೊಟ್ಟ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡುತ್ತೇನೆ: ಸಚಿವ ಪರಮೇಶ್ವರ್

ಬೆಂಗಳೂರು: ರಾಸಲೀಲೆಗಳ ಪ್ರಮುಖ ರೂವಾರಿ ಪ್ರಜ್ವಲ್​ ರೇವಣ್ಣ ಮಧ್ಯರಾತ್ರಿ ದೇಶಕ್ಕೆ ವಾಪಾಸ್​ ಆಗಿದ್ದು ವಿಶೇಷ ತನಿಖಾ ತಂಡ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಈ ಕುರಿತು ಗೃಹಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ 12.50ಕ್ಕೆ ಜರ್ಮನಿಯಿಂದ ದೇಶಕ್ಕೆ ಬಂದಿದ್ದಾರೆ, ಈಗಾಗಲೇ ವಾರೆಂಟ್​ ಜಾರಿ ಇದ್ದ ಕಾರಣ SIT ತಂಡ ವಶಕ್ಕೆ ತೆಗೆದುಕೊಂಡಿದ್ದು ಮುಂದಿನ ಕಾನೂನು ರೀತಿಯ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.

ಪ್ರಜ್ವಲ್​ ರೇವಣ್ಣನಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತ ಮಹಿಳೆಯರು ಯಾರೇ ಆದರೂ ದೂರು ನೀಡಬಹುದು ಅವರಿಗೆ ಸೂಕ್ತ ಭದ್ರತೆ ನೀಡಲಾಗುವುದು ಎಂದು ಈ ಮೊದಲೇ ಹೇಳಿದ್ದೇನೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಎಂದು ನೋಡಬೇಕು, ಸ್ವಾಭಾವಿಕವಾಗಿ ಪ್ರಜ್ವಲ್ ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದಾರೆ ಅನ್ಸುತ್ತೆ ಅದರ ಬಗ್ಗೆ ಇನ್ನೂ ಮಾಹಿತಿ ಪಡೆದುಕೊಂಡಿಲ್ಲ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್​: ವಶಕ್ಕೆ ಪಡೆದ SIT ತಂಡ

ಪ್ರಜ್ವಲ್​ ಈಗಾಗಲೇ ಸಾಕ್ಷ್ಯಗಳ ನಾಶಪಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಕ್ಷ್ಯ ನಾಶ ಬಗ್ಗೆ SIT ಅಧಿಕಾರಿಗಳು‌ ಹೇಳಿದ್ರೆ ಒಪ್ಪಬಹುದು, ಬೇರೆಯವರು ಹೇಳಿದ್ರೆ ಅದರ ಬಗ್ಗೆ ಮಾತಾಡೋಕೆ ಆಗಲ್ಲ ಎಂದರು.

ಇನ್ನು ಸಂತ್ರಸ್ತ ಮಹಿಳೆಯ ಕಿಡ್ನಾಪ್​ ಪ್ರಕರಣದಲ್ಲಿ ಶಾಸಕ ಜೆಡಿಎಸ್​ ಮುಖಂಡ ಸಾರಾ ಮಹೇಶ್​​ ಅವರ ಹೆಸರು ಕೇಳಿ ಬಂದಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಈ ವಿಚಾರವನ್ನು ಮಾದ್ಯಮಗಳಲ್ಲಿ ನೋಡಿದ್ದೇನೆ. ರಿಮ್ಯಾಂಡ್​ ಅರ್ಜಿಯಲ್ಲಿ ಏನಿದೆ ಅಂಥ ನಾನು ನೋಡಿಲ್ಲ, ನೋಡೋಣ ತನಿಖೆ ಮಾಡ್ತಾ ಇದ್ದಾರಲ್ಲಾ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES