Sunday, September 8, 2024

ಮಾದಪ್ಪನ ಹುಂಡಿ ಎಣಿಕೆ: 2 ಕೋಟಿಗೂ ಅಧಿಕ ಮೊತ್ತ ಸಂಗ್ರಹ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಈ ಬಾರಿ ಮಾದಪ್ಪನ ಹುಂಡಿಯಲ್ಲಿ 2 ಕೋಟಿ, 58 ಲಕ್ಷ ರೂಪಾಯಿಗೆ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ಮಲೆಮಹದೇಶ್ವರ ಬೆಟ್ಟದ ಬಸ್‌ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್‌ ಬಂದೋಬಸ್ತ್​​ನಲ್ಲಿ ಮಹದೇಶ್ವರ ಬೆಟ್ಟದ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ಕಳೆದ 30 ದಿನಗಳಲ್ಲಿ ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,58,44,097 ರೂಪಾಯಿ ಕಾಣಿಕೆ ಸೇರಿದಂತೆ 93 ಗ್ರಾಂ ಚಿನ್ನ, 3 ಕೆಜಿ 350 ಗ್ರಾಂ ಬೆಳ್ಳಿ ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಏಳು ದಿನ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಇದೇ ವೇಳೆ ಹುಂಡಿಯಲ್ಲಿ ಸೌದಿ ಅರೇಬಿಯಾ, ಜಪಾನ್, ನೇಪಾಳ ಹಾಗೂ ಕತಾರ್ ದೇಶದ ನಾಲ್ಕು ಕರೆನ್ಸಿ ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿದೆ. ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖಬೆಲೆಯ 25 ನೋಟುಗಳು ಸಹ ಕಾಣಿಕೆಯಾಗಿ ಬಂದಿವೆ.

RELATED ARTICLES

Related Articles

TRENDING ARTICLES